ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ತಮ್ಮ ಕಸದ ಗಾಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋಗಳನ್ನು ತೆಗೆದುಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.
ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್ ಫೀಡ್ನಲ್ಲಿ ಕ್ಲಿಪ್ಗಳ ಸರಣಿಯನ್ನು ಪೋಸ್ಟ್ ಮಾಡಿದ್ದಾರೆ. “ಯುಪಿಯ ಮಥುರಾ ನಗರ ನಿಗಮ್ನ ಗುತ್ತಿಗೆ ಕಾರ್ಮಿಕನೊಬ್ಬ ತನ್ನ ಕಸದ ಗಾಡಿಯಲ್ಲಿ ಪಿಎಂ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರ ಚಿತ್ರಗಳನ್ನು ಹಿಡಿದುಕೊಂಡಿದ್ದನ್ನು ಕಂಡು ಅವರನ್ನು ವಜಾಗೊಳಿಸಲಾಗಿದೆ’ ಎಂದು ಟ್ವೀಟ್ನಲ್ಲಿದೆ.
ವರದಿಗಳ ಪ್ರಕಾರ, ನಗರ ನಿಗಮ ಮಥುರಾ -ವೃಂದಾವನದ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ಸತ್ಯೇಂದ್ರ ಕುಮಾರ್ ತಿವಾರಿ, ಗುತ್ತಿಗೆ ಕಾರ್ಮಿಕನು ತಪ್ಪಾಗಿ ಮೋದಿ ಮತ್ತು ಯೋಗಿ ಅವರ ಫೋಟೋಗಳನ್ನು ಸಂಗ್ರಹಿಸಿದ್ದಾನೆ ಎಂದು ಬಹಿರಂಗಪಡಿಸಿದ್ದಾರೆ. ಈ ರೀತಿ ಕಸದ ಗಾಡಿಯಲ್ಲಿ ಸಾಗಿಸುವುದು, ವಿಡಿಯೋ ಮಾಡುವುದು ಉದ್ದೇಶಪೂರ್ವಕವಾಗಿತ್ತೇ ಎಂಬುದು ಬಹಿರಂಗವಾಗಿಲ್ಲ.