ಕೆಲವರು ಪ್ರೀತಿ ಮಾಡಿದವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ತಮ್ಮ ತಮ್ಮ ಸಿರಿವಂತಿಕೆ, ಯೋಗ್ಯತೆಗೆ ತಕ್ಕಂತೆ ಕಾರ್ಯಪ್ರವೃತ್ತರಾಗುತ್ತಾರೆ. ಅಂತೆಯೇ ಇಲ್ಲೊಬ್ಬ ಸಿರಿವಂತ ಪ್ರೇಮಿ, ತನ್ನ ಪ್ರೇಯಸಿಯನ್ನು ಮೆಚ್ಚಿಸಲು ವಿಶ್ವದ ವಜ್ರದ ರಾಜಧಾನಿ ಆಂಟ್‌ವರ್ಪ್‌ಗೆ ಹೋಗಿ ವಜ್ರದ ಉಂಗುರ ಖರೀದಿಸಿ ತಂದಿದ್ದಾನೆ. ಅದರ ಸಂಪೂರ್ಣ ವಿಡಿಯೋ ಮಾಡಿ ಶೇರ್ ಮಾಡಿದ್ದು, ಅದೀಗ ವೈರಲ್ ಆಗಿದೆ.
ತನ್ನ ಗೆಳತಿಯನ್ನು ಆಶ್ಚರ್ಯಗೊಳಿಸಲು ಭಟ್ನಾಗರ್ ಎನ್ನುವವರು ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದ್ದರು. ಅದಕ್ಕಾಗಿಯೇ ಅವರು ವಜ್ರದ ಉಂಗುರವನ್ನು ಖರೀದಿಗೆ ಮುಂದಾದರು. ಇದಕ್ಕಾಗಿ ಅವರು ಆಂಟ್‌ವರ್ಪ್‌ಗೆ ಹಾರಲು ನಿರ್ಧರಿಸಿದರು. ಅವರು ಬೆಲ್ಜಿಯಂ ನಗರವನ್ನು ತಲುಪಿದ ನಂತರ, ಉತ್ತಮ ಉಂಗುರವನ್ನು ಹುಡುಕಿ ಒಂದನ್ನು ಆಯ್ಕೆ ಮಾಡಿದ್ದಾರೆ. ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಸ್ನೇಹಿತರು ಮತ್ತು ಕುಟುಂಬವನ್ನು ಸೇರಿಸಿ ಆಡಿಟೋರಿಯಂ ಅನ್ನು ಬುಕ್ ಮಾಡಿದ್ದಾರೆ. ನಂತರ ಪ್ರೇಯಸಿಯನ್ನು ಅಲ್ಲಿಗೆ ಕರೆಸಿ ಮೊದಲು ಸ್ನೇಹಿತರ ಜೊತೆ ನೃತ್ಯ ಮಾಡಿ ನಂತರ ಉಂಗುರ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.
ಇದು ಹಲವು ನೆಟ್ಟಿಗರಿಗೆ ಖುಷಿ ತಂದಿದೆ. ಇನ್ನು ಕೆಲವರು ಶ್ರೀಮಂತರು ಹೇಗೆ ಬೇಕಾದರೂ ಪ್ರೇಮ ನಿವೇದನೆ ಮಾಡಿಕೊಳ್ಳುತ್ತೀರಾ. ವಜ್ರದ ಉಂಗುರ ನೋಡಿ ಯಾವ ಹುಡುಗಿಯಾದರೂ ಒಲಿಯುತ್ತಾಳೆ. ಆದರೆ ನಮ್ಮಂಥ ಬಡ ಪ್ರೇಮಿಗಳ ಗತಿಯೇನು ಎಂದು ದುಃಖ ತೋಡಿಕೊಂಡಿದ್ದಾರೆ.
https://www.youtube.com/watch?v=P6niyX4t4WA&feature=youtu.be