
ಪ್ರಾಣಿ-ಪಕ್ಷಿಗಳ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಅವುಗಳ ಪೈಕಿ ಕೆಲವು ಭಯಾನಕ ಎನ್ನಿಸುವುದು ಉಂಟು. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಭಯಾನಕ ಎನ್ನುವ ವೀಡಿಯೊ ವೈರಲ್ ಆಗಿದೆ. ಆದರೆ ವೀಡಿಯೊದ ಹಿಂದಿನ ಸತ್ಯವು ನೀವು ಗ್ರಹಿಸುವುದಕ್ಕಿಂತ ಸ್ವಲ್ಪ ವಿಭಿನ್ನವಾಗಿದೆ.
ಇದರಲ್ಲಿ ದೊಡ್ಡ ಮೊಸಳೆಯೊಂದನ್ನು ನೋಡಬಹುದು. ಈ ಮೊಸಳೆಯ ಹಿಂದೆ ಮತ್ತು ಮುಂದೆ ವ್ಯಕ್ತಿಗಳು ನಿಂತಿದ್ದಾರೆ. ಹಿಂದೆ ನಿಂತಿರುವ ವ್ಯಕ್ತಿ ಮೊಸಳೆಯ ಬಾಲವನ್ನು ಹಿಡಿದಿದ್ದರೆ, ಇನ್ನೋರ್ವ ವ್ಯಕ್ತಿ ಮೊಸಳೆಯ ಬಾಯಿಯ ಬಳಿ ನಿಂತಿದ್ದಾನೆ.
ಕೂಡಲೇ ಮೊಸಳೆಯು ದೊಡ್ಡದಾಗಿ ಬಾಯಿಯನ್ನು ತೆರೆಯುತ್ತದೆ. ಆಗ ಒಬ್ಬ ಜೀವಂತ ವ್ಯಕ್ತಿ ಮೊಸಳೆಯ ಬಾಯಲ್ಲಿ ಇರುವುದನ್ನು ನೋಡಬಹುದು. ಆತ ತನ್ನ ಕೈಯನ್ನು ಹೊರಕ್ಕೆ ಚಾಚುತ್ತಾನೆ. ಹೊರಗಡೆ ಇರುವ ವ್ಯಕ್ತಿ ಆತನನ್ನು ಹೊರಕ್ಕೆ ಎಳೆಯುವುದನ್ನು ನೋಡಬಹುದು. ಅಷ್ಟೊತ್ತಿಗಾಗಲೇ ವಿಡಿಯೋ ಕಟ್ ಆಗುತ್ತದೆ. ಇದನ್ನು ನೋಡಿದಾಗ ಭೀಕರ ವಿಡಿಯೋ ಎನ್ನಿಸುತ್ತದೆ.
ಆದರೆ ಅಸಲಿಗೆ ಇದು ನಿಜವಾದದ್ದಲ್ಲ, ಇದರಲ್ಲಿ ಮೊಸಳೆ ರೋಬೋಟಿಕ್ ಆಗಿದೆ. ಆದರೆ ಇದು ನಿಜವಾದದ್ದು ಎನ್ನಿಸಿ ಭಯಭೀತರಾಗುವುದಂತೂ ನಿಜ.
https://youtu.be/3sAM5OlH_Vg