ಆರಾಮದಾಯಕ ಕುರ್ಚಿಯ ಮೇಲೆ ಕುಳಿತು ಕಾಫಿಯಲ್ಲಿ ಡೋನಟ್ ಅದ್ದಿಕೊಂಡು ಸೇವಿಸುತ್ತ ಆನಂದಿಸುವುದು ಸಹಜ. ಆದರೆ, ವಿಲಕ್ಷಣವಾಗಿ ಸಾಹಸ ಪ್ರವೃತ್ತಿ ತೋರಿ ಆನಂದ ಪಡೆಯುವ ಪ್ರಯತ್ನ ಮಾಡುವವರಿದ್ದಾರಾ? ಎಂದು ನೋಡಿದರೆ, ಅಂಥವರು ಕೆಲವರು ಸಿಗುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಇಂಥದ್ದೇ ಒಂದು ವಿಡಿಯೋ ಗಮನ ಸೆಳೆದಿದೆ.
ಆತ 60 ಮೀಟರ್ ಎತ್ತರದಿಂದ ಬಂಗೀ ಜಂಪಿಂಗ್ ಮಾಡಿ, ಕೈಯಲ್ಲಿ ಹಿಡಿದುಕೊಂಡಿದ್ದ ಡೋನಟ್ ಅನ್ನು ಕಾಫಿಗೆ ಅದ್ದಿ ತೆಗೆಯುವ ಸಾಹಸ ಮಾಡಿದ್ದಾರೆ. ಇದರ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದೆ. ದಾಖಲೆ ನಿರ್ಮಿಸಿದಾತ ರಾನ್ ಜೋನ್ಸ್.
ಕೆಕೆ ಸಾವಿನ ಬಗ್ಗೆ ಸಿಬಿಐ ತನಿಖೆ ಆಗಲಿ ಎಂದ ನಂದಿತಾ ಪುರಿ
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿರಾನ್ ಜಾನ್ಸ್ ರೆಕಾರ್ಡ್‌ಗೆ ಪ್ರಯತ್ನಿಸುತ್ತಿರುವ ಕ್ಲಿಪ್ ಅನ್ನು ಹಂಚಿಕೊಂಡಿದೆ. ಇದರಲ್ಲಿ, ರಾನ್ ಬಂಗೀ ಜಂಪಿಂಗ್ ಮಾಡುವುದಕ್ಕೆ ಹಗ್ಗ ಕಟ್ಟಿಕೊಂಡು ಸಜ್ಜಾಗಿರುವ ದೃಶ್ಯವಿದೆ. ಅಲ್ಲಿಂದ ಹಾರಿ ನೇರವಾಗಿ ನೆಲದ ಕಡೆಗೆ ಜಾರಿ ತನ್ನ ಕೈಯನ್ನು ಚಾಚಿ ಡೋನಟ್ ಅನ್ನು ಕಾಫಿ ಕಪ್‌ನಲ್ಲಿ ಯಶಸ್ವಿಯಾಗಿ ಮುಳುಗಿಸುವ ದೃಶ್ಯವಿದೆ.
ಈ ವಿಡಿಯೋಕ್ಕೆ ಶೀರ್ಷಿಕೆ ಹೀಗಿದೆ – “ರಾನ್ ಜೋನ್ಸ್ ಅವರಿಂದ 60.553 ಮೀಟರ್ (198 ಅಡಿ 8in) ಡೋನಟ್ (ಬಂಗೀ ಜಂಪಿಂಗ್) ನ ಅತ್ಯುನ್ನತ ಡಂಕ್”. ಈ ವಿಡಿಯೋ 79000ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ಮಹತ್ವದ ಸಾಧನೆಯಾಗಿದ್ದರೂ, ಇದೇ ರೀತಿಯ ಪ್ರಯತ್ನವು ಈಗಾಗಲೇ 2016ರಲ್ಲಿ ಆಗಿದೆ. 73.41 ಮೀಟರ್ ಎತ್ತರದಿಂದ ಟೀ ಕಪ್‌ನಲ್ಲಿ ಬಿಸ್ಕತ್ ಅನ್ನು ಮುಳುಗಿಸಿದ ಯುಕೆಯ ಸೈಮನ್ ಬೆರ್ರಿ ನಿರ್ಮಿಸಿದ ಅತಿ ಎತ್ತರದ ಬಂಗೀ ಡಂಕ್ ದಾಖಲೆಯಾಗಿದೆ.