ಅಮೆರಿಕದ ವ್ಯಕ್ತಿಯೊಬ್ಬರು ಕ್ರಿಸ್ಮಸ್ ವೃಕ್ಷವನ್ನು ಹೋಲುವಂತೆ ಗಡ್ಡದಲ್ಲಿ ಬಾಬಲ್ಸ್ ಗಳನ್ನು ನೇತುಹಾಕಿ ದಾಖಲೆ ಮಾಡಿದ್ದಾರೆ.
710 ಬಹುವರ್ಣದ baubles ಗಳಿಂದ ತಮ್ಮ ಗಡ್ಡವನ್ನು ಅಲಂಕರಿಸುವ ಮೂಲಕ ಇವರು ಈ ಸಾಧನೆ ಮಾಡಿದ್ದಾರೆ. ಕುನಾದ ಜೋಯಲ್ ಸ್ಟ್ರಾಸರ್ ಅವರು ಗಡ್ಡದಲ್ಲಿ ಅತಿ ಹೆಚ್ಚು baublesಗಳನ್ನು ಧರಿಸಿದ್ದಾರೆ.
“ಡಿಸೆಂಬರ್ 2019 ರಲ್ಲಿ ನಾನು ಮೊದಲ ಬಾರಿಗೆ ನನ್ನ ಗಡ್ಡದಲ್ಲಿ baublesವನ್ನು ಅಂಟಿಸಿದ್ದೇನೆ. ಆಗಲೇ ಮೊದಲ ಬಾರಿಗೆ ನಾನು ದಾಖಲೆಯನ್ನು ಬರೆದಿದ್ದೆ. ಈಗ ಪುನಃ ನನ್ನ ದಾಖಲೆಯನ್ನು ನಾನೇ ಮುರಿದಿದ್ದೇನೆ” ಎಂದು ಜೋಯಲ್ ಹೇಳಿದ್ದಾರೆ.
2019ರಿಂದ ನಾನು ಪ್ರತಿ ಕ್ರಿಸ್‌ಮಸ್‌ನಲ್ಲಿ ನನ್ನ ಗಡ್ಡದ ಮೇಲೆ ಈ ಪ್ರಯೋಗ ಮಾಡುತ್ತೇನೆ. ಈಗ ನನಗೆ ಇನ್ನಷ್ಟು ಹುಚ್ಚು ಹತ್ತಿದೆ ಎಂದಿದ್ದಾರೆ.
710 baublesಗಳನ್ನು ಗಡ್ಡಕ್ಕೆ ಜೋಡಿಸುವ ಪ್ರಕ್ರಿಯೆಯು ಎರಡೂವರೆ ಗಂಟೆಗಳನ್ನು ತೆಗೆದುಕೊಂಡಿತು ಮತ್ತು ಅವುಗಳನ್ನು ತೆಗೆದುಹಾಕಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು ಎಂಬ ಮಾಹಿತಿ ಅವರು ನೀಡಿದರು.