ನ್ಯೂಯಾರ್ಕ್: ಅಮೆರಿಕದ ಇಲಿನಾಯ್ಸ್‌ನ ಜೆನೆಸಿಯೊದ ಡೇವನ್‌ಪೋರ್ಟ್‌ನ 20 ವರ್ಷದ ಡಾಲ್ಟನ್ ಮೆಯೆರ್ ಎಂಬಾತ ಚಪ್ಪಾಳೆ ತಟ್ಟುವುದರಲ್ಲಿ ಗಿನ್ನೆಸ್ ದಾಖಲೆ ಬರೆದಿದ್ದಾರೆ. ಒಂದು ನಿಮಿಷದಲ್ಲಿ 1,140 ಬಾರಿ ಚಪ್ಪಾಳೆ ತಟ್ಟುವ ಮೂಲಕ ಈ ದಾಖಲೆ ಬರೆದಿದ್ದಾರೆ. ಇದರರ್ಥ ಪ್ರತಿ ಸೆಕೆಂಡಿಗೆ ಸುಮಾರು 19 ಚಪ್ಪಾಳೆಗಳನ್ನು ಹೊಡೆದಿದ್ದಾರೆ.
ಈ ಮುಂಚೆ ದಾಖಲೆಯಲ್ಲಿರುವುದಕ್ಕೆ 37 ಬಾರಿ ಹೆಚ್ಚಿಗೆ ಚಪ್ಪಾಳೆ ಬಾರಿಸಿ ದಾಖಲೆಯ ಪುಟ ಸೇರಿದ್ದಾರೆ. 12 ಮಾರ್ಚ್ 2022 ರಂದು ಅಮೆರಿಕದ ಇಲಿನಾಯ್ಸ್‌ನ ಜೆನೆಸಿಯೊದಲ್ಲಿ ಡಾಲ್ಟನ್ ಮೆಯೆರ್ ಅವರು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವರು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಒಂದು ನಿಮಿಷದಲ್ಲಿ ಹೆಚ್ಚು ಚಪ್ಪಾಳೆ ತಟ್ಟಿದ ದಾಖಲೆ ಬರೆದಿದ್ದರು. ನಂತರ ಆ ದಾಖಲೆಯನ್ನು ಬೇರೆಯವರು ಮುರಿಯುತ್ತಾ ಸಾಗಿದರು. ಈಗ ಇದನ್ನೇ ಸವಾಲಾಗಿ ಸ್ವೀಕರಿಸಿ ಎಲ್ಲಾ ದಾಖಲೆ ಮುರಿದಿದ್ದಾರೆ.