
ಸ್ಕೂಟರ್ ನೊಳಗೆ ಅಡಗಿ ಕುಳಿತಿದ್ದ ನಾಗರ ಹಾವೊಂದನ್ನು ವ್ಯಕ್ತಿಯೊಬ್ಬ ಬರಿಗೈಯಲ್ಲಿ ತೆಗೆದಿರುವ ವಿಡಿಯೋ ಒಂದು ವೈರಲ್ ಆಗಿದೆ. ಇದನ್ನು ನೋಡಿದರೆ ಭಯ ಹುಟ್ಟಿಸುವಂತಿದ್ದು, ಹಾವು ಹಿಡಿಯುವಾತ ಮಾತ್ರ ಯಾವುದೇ ಅಳುಕಿಲ್ಲದೇ ಅದನ್ನು ಹೊರಕ್ಕೆ ತೆಗೆದಿದ್ದಾನೆ.
ಅವಿನಾಶ್ ಯಾದವ್ ಎನ್ನುವವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಸ್ಕೂಟರ್ನಲ್ಲಿ ಬುಸ್ ಬುಸ್ ಎಂಬ ಶಬ್ದ ಕೇಳುತ್ತಿದ್ದಂತೆಯೇ ಅದರ ಮಾಲೀಕನಿಗೆ ಗಾಡಿಯೊಳಕ್ಕೆ ಹಾವು ಇರಬಹುದು ಎಂಬ ಶಂಕೆ ಮೂಡಿದೆ. ಸ್ಕೂಟರ್ ಮುಂಭಾಗದಲ್ಲಿ ಈ ಶಬ್ದ ಬರುತ್ತಿತ್ತು.
ಕೂಡಲೇ ಅವರು ಹಾವು ಹಿಡಿಯುವವನಿಗೆ ಕರೆ ಮಾಡಿದ್ದಾರೆ. ನಂತರ ಹಾವು ಸಂರಕ್ಷಕ ಮೊದಲು ಉಪಕರಣವನ್ನು ಬಳಸಿಕೊಂಡು ಸ್ಕೂಟರ್‌ನ ಮುಂಭಾಗವನ್ನು ತೆರೆದಿದ್ದಾನೆ. ಆಮೇಲೆ ಯಾವುದೇ ಭಯವಿಲ್ಲದೇ ಅಲ್ಲಿ ಅಡಗಿ ಕುಳಿತಿದ್ದ ನಾಗರಹಾವನ್ನು ಬರಿಗೈಯಲ್ಲಿ ಹೊರಕ್ಕೆ ತೆಗೆದಿದ್ದಾನೆ. ಇದರ ವಿಡಿಯೋ ನೋಡುವವರು ಮಾತ್ರ ಬೆಚ್ಚಿಬೀಳುವಂತಿದೆ.