ಬೆಳಗ್ಗೆ ವಾಕಿಂಗ್ಗೆ ಹೋದಾಗ ನಿಮ್ಮ ಜೊತೆ ಸಿಂಹಗಳೂ ವಾಕ್ ಮಾಡುವುದನ್ನು ಊಹಿಸಿಕೊಳ್ಳಲು ಸಾಧ್ಯವೆ? ಸಿಂಹ ಎಂಬ ಹೆಸರು ಕೇಳಿದರೆ ಬೆಚ್ಚಿಬೀಳುವ ಜನರು ಅವುಗಳ ಜೊತೆ ವಾಕ್ ಹೋಗುವುದೆ ? ಸಿಂಹವನ್ನು ಪಳಗಿಸಲಾಗಿದೆ, ಭಯಪಡಬೇಡಿ ಎಂದು ಹೇಳಿದರೂ ಈ ದುಸ್ಸಾಹಕ್ಕೆ ಕೈಹಾಕಲು ಜನರು ಬಯಸುವುದಿಲ್ಲ ಬಿಡಿ.
ಆದರೆ ಇಲ್ಲೊಂದು ವೈರಲ್ ವಿಡಿಯೋದಲ್ಲಿ ವಾಕಿಂಗ್ಗೆ ಜನರು ಹೋದಾಗ ಸಿಂಹಗಳೂ ವಾಕಿಂಗ್ ಮಾಡುವುದು ಕಂಡುಬಂದಿದೆ. ಹಾಗೆಂದು ಇದು ಯಾವುದೋ ದೇಶದ ಘಟನೆಯಲ್ಲ, ಖುದ್ದು ಭಾರತದಲ್ಲಿಯೇ ನಡೆದಿರುವುದು, ಅದೂ ಗುಜರಾತ್ನಲ್ಲಿ.
ಇತ್ತೀಚೆಗಷ್ಟೇ ಗುಜರಾತ್‌ನ ಗಿರ್ ಬಳಿಯ ನಗರದಲ್ಲಿ ಸಿಂಹಗಳ ಗುಂಪು ತಿರುಗಾಡುತ್ತಿರುವುದು ಕಂಡುಬಂದಿದೆ. ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೆಬ್ರವರಿ 15 ರಂದು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟರ್‌ನಲ್ಲಿ ವಿಡಿಯೋ ವನ್ನು ಪೋಸ್ಟ್ ಮಾಡಿದ್ದಾರೆ.
‘ಇನ್ನೊಂದು ರಾತ್ರಿ ಮತ್ತೊಂದು ಹೆಮ್ಮೆ…… ಗುಜರಾತ್‌ನ ಬೀದಿಗಳಲ್ಲಿ ನಡೆಯುತ್ತಿದ್ದೇನೆ’ ಎಂಬ ಶೀರ್ಷಿಕೆಯೊಂದಿಗೆ ಸುಶಾಂತಾ ಟ್ವಿಟ್ಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹಲವಾರು ಸಿಂಹಗಳು ತಡರಾತ್ರಿ ಬೀದಿಯಲ್ಲಿ ನಡೆಯುವುದನ್ನು ವಿಡಿಯೋ ತೋರಿಸುತ್ತದೆ. ಈ ವಿಡಿಯೋ ಸಿಸಿಟಿವಿಗಳಲ್ಲಿ ಸೆರೆಯಾಗಿದೆ.