ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನ ಅತ್ಯಂತ ಜನಪ್ರಿಯ ವನ್ಯಜೀವಿ ಸಫಾರಿ ತಾಣಗಳಲ್ಲಿ ಒಂದಾಗಿದೆ.
ಇಲ್ಲಿ ಸಿಂಹಗಳು ಮತ್ತು ಒಂದು ಕೊಂಬಿನ ಘೇಂಡಾ ಮೃಗಗಳಿಂದ ಹಿಡಿದು ಆನೆಗಳು ಮತ್ತು ಕಾಡೆಮ್ಮೆ ಸೇರಿ ಅಪರೂಪದ ಪ್ರಾಣಿಗಳನ್ನು ಹೊಂದಿದೆ. ಇತ್ತೀಚೆಗೆ, ಕ್ರುಗರ್ ರಾಷ್ಟ್ರೀಯ ಉದ್ಯಾನವನದ ಮೂರು ಸಿಂಹಿಣಿಗಳು ಸ್ಟೈಲಿಶ್ ವಾಕ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವನ್ಯಜೀವಿ ಛಾಯಾಗ್ರಾಹಕ ಡಿಯೋನ್ ಕೆಲ್ಬ್ರಿಕ್ ಅವರು ಈ ವಿಸ್ಮಯಕಾರಿ ವಿಡಿಯೊವನ್ನು ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಂಹಿಣಿಗಳ ಹಿಂದೆ ಕಾರುಗಳನ್ನು ಸಹ ಗುರುತಿಸಬಹುದು. ಕಾಡಿನ ಮೂವರು ರಾಣಿಯರು ವಾಹನಗಳ ಓಡಾಟಕ್ಕೆ ಅಡ್ಡಿಪಡಿಸಿ ತಮ್ಮ ಪಾಡಿಗೆ ತಾವು ಹೆಜ್ಜೆ ಹಾಕುತ್ತಾ ಸಾಗುತ್ತವೆ. ಪ್ರವಾಸಿಗರು ಚಿತ್ರಗಳನ್ನು ಕ್ಲಿಕ್ ಮಾಡಿ ವಿಡಿಯೊಗಳನ್ನು ರೆಕಾರ್ಡ್ ಮಾಡುವುದನ್ನೂ ಸಹ ಕಾಣಬಹುದು.