
ಸಿಂಹವೊಂದು ಹಸಿದ ಮೊಸಳೆಗಳಿಂದ ಸುತ್ತುವರಿಯಲ್ಪಟ್ಟಾಗ ತಾನು ಜೀವ ಉಳಿಸಿಕೊಳ್ಳಲು ನಡೆಸಿದ ಹೋರಾಟದ ರೋಮಾಂಚಕ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಕಂಪಾಸ್ ಮೀಡಿಯಾ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋವನ್ನು ಮೇ 23 ರಂದು ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಚಿತ್ರೀಕರಿಸಿದ್ದಾಗಿದೆ.
ಮನೆ ಕಟ್ಟುವ ನಿಮ್ಮ ʼಕನಸುʼ ಈಡೇರಬೇಕೆಂದರೆ ಅನುಸರಿಸಿ ಈ ಉಪಾಯ
ಹಿಪ್ಪೋ ತಿನ್ನಲು ಹೋಗಿ ಸಿಕ್ಕಿಬಿದ್ದ ಸಿಂಹವು ತಪ್ಪಿಸಿಕೊಳ್ಳಲು 40 ಮೊಸಳೆಗಳ ನಡುವೆ ಓಡುತ್ತದೆ. ವಿಡಿಯೋ ಕ್ಲಿಪ್‌ನಲ್ಲಿ, ಹಿಪ್ಪೋನ ಮೃತದೇಹವು ನೀರಿನ ಮೇಲೆ ತೇಲುತ್ತಿರುವುದನ್ನು ಕಾಣಬಹುದು.
ಸಿಂಹವು ಮೃತದೇಹದ ಮೇಲೆ ನಿಂತಿದ್ದರೆ, ಸಿಂಹವನ್ನು ಸುಮಾರು 40 ಮೊಸಳೆಗಳು ಸುತ್ತವರಿದಿದ್ದವು. ಅಪಾಯ ಅರಿತ ಸಿಂಹ ಎದ್ದೆನೋ ಬಿದ್ದೆನೋ ಎಂದು ಮೊಸಳೆ ನಡುವೆ ಜಿಗಿದು ಕಾಡಿನಲ್ಲಿ ಕಣ್ಮರೆಯಾಗುತ್ತದೆ. ಈ ಮುನ್ನ ಬೇಟೆಗೆ ಮೊಸಳೆಗಳು ಪ್ರಯತ್ನ ನಡೆಸಿದ್ದವು.