
ಫಿಟ್ನೆಸ್ ಬಗೆಗಿನ ತಮ್ಮ ಒಲವಿನಿಂದ ಯುವ ನೆಟ್ಟಿಗರಿಗೆ ಫಿಟ್ನೆಸ್ ಗೋಲ್‌ಗಳನ್ನು ಸೃಷ್ಟಿಸಿರುವ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ.
ಟೇಬಲ್ ಟೆನ್ನಿಸ್ ರಾಷ್ಟ್ರೀಯ ಚಾಂಪಿಯನ್ ಶ್ರೀಜಾ ಅಕುಲಾರೊಂದಿಗೆ ಟೇಬಲ್ ಟೆನಿಸ್ ಆಡುತ್ತಿರುವ ತಮ್ಮ ವಿಡಿಯೋವನ್ನು ಇತ್ತೀಚೆಗೆ ಶೇರ್ ಮಾಡಿದ್ದಾರೆ ರಿಜಿಜು. ವಿಡಿಯೋದಲ್ಲಿ ಇಬ್ಬರೂ ಆಟದಲ್ಲಿ ತಲ್ಲೀನರಾಗಿರುವುದನ್ನು ನೋಡಬಹುದಾಗಿದೆ.
“ಬಹಳ ಸಮಯದ ಬಳಿಕ ನಾನು ಟೇಬಲ್ ಟೆನ್ನಿಸ್ ಆಡಿದೆ. ಅದೂ ಭಾರತ ಮಹಿಳಾ ಟೇಬಲ್ ಟೆನಿಸ್ ಚಾಂಪಿಯನ್ ಶ್ರೀಜಾ ಅಕುಲಾರೊಂದಿಗೆ,” ಎಂದು ತಾವು ಶೇರ್ ಮಾಡಿದ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ ರಿಜಿಜು.
ಈ ಇನ್‌ಸ್ಟಾಗ್ರಾಂ ರೀಲ್ 11,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ರಿಜಿಜುರ ಕ್ರೀಡಾಸಕ್ತಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿ ಕಾಮೆಂಟ್‌ಗಳನ್ನು ಹಾಕಿದ್ದಾರೆ.