ಹಕ್ಕಿಗಳು ನಗುವುದನ್ನು ನೀವು ಎಂದಾದರೂ ನೋಡಿದ್ದೀರಾ..? ಅಥವಾ ಕೇಳಿದ್ದೀರಾ..? ಆಸ್ಟ್ರೇಲಿಯಾದ ಸ್ಯಾನ್ ಡಿಯಾಗೋ ಮೃಗಾಲಯವು ಇನ್ಸ್ಟಾಗ್ರಾಂನಲ್ಲಿ ಹಕ್ಕಿಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲರ ಗಮನ ಸೆಳೆದಿದೆ.
ಒಬ್ಬ ವ್ಯಕ್ತಿಯ ಕೈಯಲ್ಲಿ ಕುಳಿತಂತಹ ಕೂಕಬುರ್ರಾ ಹಕ್ಕಿಯು ವಿಚಿತ್ರವಾಗಿ ನಕ್ಕಿದೆ. ಅಲ್ಲದೆ ತನ್ನ ವಿಚಿತ್ರವಾದ ಧ್ವನಿಯಿಂದ ಕೂಗಲು ಪ್ರಾರಂಭಿಸಿದೆ. ನಂಬಲಸಾಧ್ಯವಾದ ಈ ವಿಡಿಯೋವನ್ನು ಮೃಗಾಲಯವು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದೆ. ಸದ್ಯ ತನ್ನ ವಿಚಿತ್ರ ಧ್ವನಿಯಿಂದ ಈ ಕೂಕಬುರ್ರಾ ಎಂಬ ಹಕ್ಕಿ ಎಲ್ಲರನ್ನೂ ರಂಜಿಸಿದೆ.
ಕಾರಿನ ಹೊಸ ನಿಯಮ ಜಾರಿಗೆ ಬಂದ್ರೆ ಬೀಳಲಿದೆ ಜೇಬಿಗೆ ಕತ್ತರಿ
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನಸೂರೆಗೊಂಡಿದೆ. ಕೆಲವರು ತಾವು ಈ ಹಕ್ಕಿಯ ಧ್ವನಿಯನ್ನು ಪ್ರೀತಿಸುವುದಾಗಿ ಹೇಳಿದ್ದರೆ, ಇನ್ನೊಬ್ಬ ‘ನಾನು ನನ್ನ ಹೊಸ ಅಲರಾಂ ವ್ಯವಸ್ಥೆಯನ್ನು ಕಂಡುಕೊಂಡೆ’, ಅಲ್ಲದೆ ಮತ್ತೊಬ್ಬನ ನಾಯಿಯು ಈ ಧ್ವನಿಯಿಂದ ಗೊಂದಲಕ್ಕೊಳಗಾಗಿದೆ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.
https://www.youtube.com/watch?v=lzWhIX-y5l4