ಭಾರತೀಯ ವಿವಾಹಗಳು ಒಂದು ದೊಡ್ಡ ಆಚರಣೆಯಾಗಿದೆ. ಈ ಆಚರಣೆಯ ಸಮಯದಲ್ಲಿ, ಢೋಲ್‌ನ ಬಡಿತಗಳು ಎಷ್ಟು ಶಕ್ತಿಯುತವಾಗಿರುತ್ತವೆ ಎಂದರೆ ಯಾರೊಬ್ಬರೂ ಅದಕ್ಕೆ ಕಾಲು ಅಲ್ಲಾಡಿಸದೇ ಇರಲು ಸಾಧ್ಯವಿಲ್ಲ. ಅಂಥದ್ದೇ ವಿಡಿಯೋ ಒಂದು ವೈರಲ್ ಆಗಿದೆ.
ದಕ್ಷಿಣ ಕೊರಿಯಾದ ವರ ಕೂಡ ಭಾರತೀಯ ವಿವಾಹದ ಈ ರುಚಿಯನ್ನು ಪಡೆದುದನ್ನು ವಿಡಿಯೋದಲ್ಲಿ ನೋಡಬಹುದು. ಈ ಮದುವೆಯಲ್ಲಿ ‘ಬಾರಾತಿಗಳು’ ಪಂಜಾಬಿ ‘ಬೋಲಿ’ಗೆ ನೃತ್ಯ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ಟಾಗ್ರಾಮ್ನಲ್ಲಿ ‘currynkimchi’ ಎಂಬ ಬಳಕೆದಾರರು ದಕ್ಷಿಣ ಕೊರಿಯಾದ ವರ ಜಿಮಿನ್ ಅವರ ಭಾರತೀಯ ವಿವಾಹದ ಸಮಯದಲ್ಲಿ ಮದುವೆಯ ಅತಿಥಿಯೊಬ್ಬರು ಹಾಡಿದ ‘ಬೋಲಿ’ ಗೆ ನೃತ್ಯ ಮಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಸಾಂಪ್ರದಾಯಿಕ ‘ಶೆರ್ವಾನಿ’ ಧರಿಸಿದ ಜಿಮಿನ್, ಕುದುರೆಯ ಮೇಲೆ ಕುಳಿತು ಪಂಜಾಬಿ ‘ಬೋಲಿ’ಗೆ ನರ್ತಿಸಿದ್ದಾನೆ. ಈ ಹಾಡು ಮತ್ತು ನೃತ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಥಹರೇವಾರಿ ಕಮೆಂಟ್ ಮಾಡುತ್ತಿದ್ದಾರೆ.
https://youtu.be/GfmG4XrxC5o