ಶಾಲಾ ವಾಹನದ ಚಾಲಕನೊಬ್ಬ ಏಕಾಏಕಿ ಪ್ರಜ್ಞೆ ತಪ್ಪಿದಾಗ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದಾಗ್ಯೂ, ವಿದ್ಯಾರ್ಥಿಗಳಲ್ಲಿ ಒಬ್ಬ ಮುಂದೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಎಲ್ಲಾ ಮಕ್ಕಳನ್ನು ಪಾರು ಮಾಡಿದ್ದಾನೆ.
ಚಾಲಕ ಪ್ರಜ್ಞೆ ತಪ್ಪಿದಾಗ ಮಿಚಿಗನ್‌ನ ಕಾರ್ಟರ್ ಮಿಡಲ್ ಸ್ಕೂಲ್‌ನ ಡಿಲೋನ್ ರೀವ್ಸ್ ಎಂಬ ಏಳನೇ ತರಗತಿ ವಿದ್ಯಾರ್ಥಿಯು ವಾಹನವನ್ನು ನಿರ್ವಹಿಸಲು ಮತ್ತು ಅದನ್ನು ಎಚ್ಚರಿಕೆಯಿಂದ ನಿಲ್ಲಿಸಲು ಚಾಲಕನ ಕ್ಯಾಬಿನ್‌ಗೆ ಧಾವಿಸಿದನು. ಬಸ್ ಅನ್ನು ಯಶಸ್ವಿಯಾಗಿ ನಿಲ್ಲಿಸಿದ ನಂತರ, ಆತ ಇತರೆ ವಿದ್ಯಾರ್ಥಿಗಳಿಗೆ ಸಹಾಯಕ್ಕಾಗಿ ತುರ್ತು ಲೈನ್‌ಗೆ ಕರೆ ಮಾಡುವಂತೆ ಹೇಳಿದ್ದಾನೆ. ಯಾರಾದರೂ 911 ಗೆ ಕರೆ ಮಾಡುವಂತೆ ತಿಳಿಸಿದ್ದಾನೆ.
ಏಪ್ರಿಲ್ 26 ರಂದು ನಡೆದ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಶಾಲಾ ವಿದ್ಯಾರ್ಥಿಗಳ ಜೀವ ಉಳಿಸಿದ್ದಕ್ಕಾಗಿ ಬಾಲಕ ಈಗ ಹೀರೋ ಮತ್ತು ಸೂಪರ್‌ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಬಾಲಕ ರೀವ್ಸ್ ನ ಪೋಷಕರು ತಮ್ಮ ಮಗನ ಸಾಧನೆಯನ್ನು ಕೊಂಡಾಡಿದ್ದಾರೆ.
ಅಂದಹಾಗೆ, ಶಾಲಾ ಬಸ್ 66 ಮಂದಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿತ್ತು. ಬಾಲಕ ಬಸ್ ಅನ್ನು ಸುರಕ್ಷಿತವಾಗಿ ನಿಲ್ಲಿಸುತ್ತಿದ್ದಾನೆ. ವಿಷಯ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಇಲಾಖೆಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ರು. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೇರೆ ಬಸ್‌ನಲ್ಲಿ ಅವರ ಮನೆಯತ್ತ ಕರೆದೊಯ್ಯುವ ವ್ಯವಸ್ಥೆ ಮಾಡಿದ್ರು.