ಒಳ್ಳೆಯ ಕೆಲಸ ಮಾಡಿದ್ರೆ, ಮುಂದಿನ ಜನ್ಮದಲ್ಲಿ ಒಳ್ಳೆ ಫಲ ಸಿಗುತ್ತೆ. ಕೆಟ್ಟದ್ದೇನಾದರೂ ಮಾಡಿದ್ರೆ ಅದನ್ನೂ ಅನುಭವಿಸಬೇಕಾಗುತ್ತೆ ಅನ್ನೋ ನಂಬಿಕೆ ಇದೆ. ಅದು ನಿಜ ಕೂಡಾ ಹೌದು. ಆದರೆ ಕರ್ಮದ ಫಲ ಅನುಭವಿಸೋದಕ್ಕೆ ಒಂದು ಜನ್ಮ ಕಾಯಬೇಕಿಲ್ಲ. ಎಲ್ಲವೂ ಅದೇ ಕ್ಷಣದಲ್ಲಿ ರಿಟರ್ನ್ ಸಿಗುತ್ತೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳು ಒಂದೆರಡಲ್ಲ. ಕೆಲ ವಿಡಿಯೋಗಳು ಶಾಕಿಂಗ್ ಆಗಿದ್ರೆ, ಇನ್ನು ಕೆಲವು ನಿಬ್ಬೆರಗಾಗಿಸುವ ಹಾಗಿರುತ್ತೆ. ಇನ್ನೂ ಕೆಲ ವಿಡಿಯೋಗಳಂತೂ ಜೀವನದಲ್ಲಿ ಒಂದು ಪಾಠ ಅಂತ ಕಲಿಸಿರುತ್ತೆ. ಅಂತಹ ವಿಡಿಯೋಗಳಲ್ಲಿ ಈ ವಿಡಿಯೋ ಕೂಡಾ ಒಂದು.
ಇಲ್ಲಿ ಒಬ್ಬ ಬಾಲಕ ಗೋಡೆಯ ಮೇಲೆ ಕುಳಿತು ಸುಮ್ಮನೆ ಅಲ್ಲಿ ಇದ್ದ ಒಂದು ಹಸುವಿಗೆ ಸುಮ್ಮ-ಸಮ್ಮನೆ ಒದೆಯುತ್ತಾನೆ. ಆಗ ಸುಮ್ಮನಿರದ ಆ ಹಸು ತಕ್ಷಣವೇ ಆತನಿಗೆ ಹಿಂಗಾಲಿನಿಂದ ಒದೆಯುತ್ತೆ. ಆ ಹಸುವಿನ ಒದೆ ತಾಳಲಾರದೇ ಆ ಬಾಲಕ ಕಂಪೌಡಿನಿಂದ ಕೆಳಗೆ ಬಿದ್ದು ಬಿಡುತ್ತಾನೆ.
ಈ ವಿಡಿಯೋ ನಾವು ಮಾಡಿದ ಕರ್ಮದ ಫಲ ನಾವೇ ಅನುಭವಿಸಬೇಕು. ಅದಕ್ಕೂ ತುಂಬಾ ಸಮಯ ಬೇಕಾಗಿಲ್ಲ ಅನ್ನುವ ಸಂದೇಶ ಕೊಡುವ ಹಾಗಿದೆ ಈ ವಿಡಿಯೋ. ಸುಸಂತಾ ನಂದಾ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅದಕ್ಕೆ ಇನ್‌ಸ್ಟಂಟ್ ಕರ್ಮ ಅನ್ನೊ ಶೀರ್ಷಿಕೆ ಕೊಟ್ಟಿದ್ದಾರೆ.
ಈ ವಿಡಿಯೋ ನೋಡಿರೋ ನೆಟ್ಟಿಗರು, ಇದಕ್ಕೆ ಕಾಮೆಂಟ್ ಹಾಕಿರುವ ರೀತಿ ಹೀಗಿದೆ. ಓರ್ವ ವ್ಯಕ್ತಿ “ಮೂಕ ಪ್ರಾಣಿಗಳ ಜೊತೆ ಈ ರೀತಿ ವ್ಯವಹರಿಸುವುದು ಮೊದಲನೇ ತಪ್ಪು. ಅದಕ್ಕೂ ನೋವಾಗುತ್ತೆ. ಈಗ ಹಸು ಹೀಗೆ ಒದ್ದಿದೆ ಅಂದ್ರೆ ಅದಕ್ಕೂ ನೋವಾಗಿದೆ ಅಂತ ಅರ್ಥ. ಯಾರಿಗೂ ನಾವು ಕಡೆಗಣಿಸಬಾರದು. ಅವರು ನಿಮಗಿಂತಲೂ ಶ್ರೇಷ್ಠವಾಗಿರಬಹುದು. ಈ ವಿಡಿಯೋ ಎಲ್ಲರಿಗೂ ಒಂದು ಉತ್ತಮ ಸಂದೇಶ“ಎಂದು ಬರೆದಿದ್ದಾರೆ.
ಇನ್ನೊಬ್ಬರು: ಒಂದು ಕ್ರಿಯೆ ನಡೆದಿದೆ ಅಂದರೆ ಅದಕ್ಕೆ ಒಂದು ಪ್ರತ್ಯುತ್ತರವಾಗಿ ಇನ್ನೊಂದು ಕ್ರಿಯೆಯೂ ನಡೆದಿರುತ್ತೆ. ಇದನ್ನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾಮೆಂಟ್ ಹಾಕಿದ್ದಾರೆ.
ಅದೇ ರೀತಿ ಇನ್ನೊಬ್ಬರು ಕೃಷ್ಣ ಹೇಳಿರುವ ಹಾಗೆ ಎಂದು ಬರೆದು “ನೀವು ನಿಮ್ಮ ಕೆಲಸವನ್ನ ಮಾಡುತ್ತಲೇ ಇರಿ, ಮುಂದೆ ಏನಾಗಬೇಕೋ ಅದು ಆಗೇ ಆಗುತ್ತೆ. ಅದರ ಬಗ್ಗೆ ಹೆಚ್ಚು ಚಿಂತಿಸುವ ಅವಶ್ಯಕತೆ ಇಲ್ಲ” ಎಂದು ಬರೆದಿದ್ದಾರೆ.
ಇದೇ ರೀತಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಅನಿಸಿಕೆಯನ್ನ ವ್ಯಕ್ತಪಡಿಸಿದ್ದಾರೆ.