ಕೆನಡಾದ ಬ್ರಾಂಪ್ಟನ್ ನಗರದಲ್ಲಿ ಭಾರತೀಯರು ಹಾಗೂ ಖಲಿಸ್ತಾನಿ ಪರ ಗುಂಪಿನ ನಡುವೆ ಘರ್ಷಣೆ ನಡೆದಿದೆ. ದೀಪಾವಳಿ ಆಚರಣೆಗಾಗಿ ವೆಸ್ಟ್ ವುಡ್ ಮಾಲ್ ನಲ್ಲಿ ಸೇರಿದ್ದ ವೇಳೆ ಈ ಮುಖಾಮುಖಿಯಾಗಿದೆ.
ಉಭಯ ಗುಂಪುಗಳ 400 ರಿಂದ 500ಕ್ಕೂ ಅಧಿಕ ಮಂದಿ ಮಾಲ್ ನಲ್ಲಿ ನೆರೆದಿದ್ದು, ಖಲಿಸ್ತಾನಿ ಪರ ಬೆಂಬಲಿಗರು ಕ್ಯಾತೆ ತೆಗೆದಿದ್ದಾರೆ. ಅಲ್ಲದೆ ಹಳದಿ ಬಾವುಟವನ್ನು ಬೀಸಿ ಖಲಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕಲಾಗಿದೆ.
ಇದಕ್ಕೆ ಭಾರತೀಯರು ತಕ್ಕ ತಿರುಗೇಟು ನೀಡಿದ್ದು, ತ್ರಿವರ್ಣ ಧ್ವಜಗಳನ್ನು ಬೀಸುತ್ತಾ ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದಾರೆ. ಘರ್ಷಣೆಯಲ್ಲಿ ಓರ್ವನಿಗೆ ಗಾಯವಾಗಿದೆ ಎನ್ನಲಾಗಿದ್ದು, ಹಿರಿಯರು ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ.