
ಕೇರಳದ ವ್ಲಾಗರ್ ಆಗಿರುವ ಮೊಹಮ್ಮದ್ ಯಾಸೀನ್ ತಾಲಿಬಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಹಾಗೂ ಅವರ ಶಸ್ತ್ರಾಸ್ತ್ರಗಳನ್ನು ತನ್ನ ಯುಟ್ಯೂಬ್ನಲ್ಲಿ ಪ್ರದರ್ಶಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಆದರೆ ತನ್ನ ವಿಡಿಯೋದಲ್ಲಿ ಶಸ್ತ್ರಾಸ್ತ್ರ ಪ್ರದರ್ಶನ ಮಾಡಿದ ಕಾರಣಕ್ಕೆ ಇವರ ಖಾತೆಯನ್ನು ಪರಿಶೀಲನೆಯಲ್ಲಿ ಇಡಲಾಗಿದೆ. ಈ ವಿಡಿಯೋ ಶೂಟ್ ಮಾಡಲು ಯಾಸೀನ್ ಸ್ವತಃ ತಾಲಿಬಾನ್ ನಿಯಂತ್ರಿತ ಅಪ್ಘಾನಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ವಿಡಿಯೋದಲ್ಲಿ ಯಾಸೀನ್ ತಾಲಿಬಾನ್ ತಂತ್ರಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಯಾಸೀನ್ ತನ್ನ ಯುಟ್ಯೂಬ್ ಚಾನೆಲ್ ಯಾಸೀನ್ ವ್ಲಾಗ್ಸ್ನಲ್ಲಿ ಅನೇಕ ವಿಡಿಯೋಗಳನ್ನ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಉಗ್ರಗಾಮಿ ಇಸ್ಲಾಮಿಸ್ಟ್ ಆಡಳಿತಕ್ಕೆ ಭೇಷ್ ಎಂದಿದ್ದಾನೆ.
ತಾಲಿಬಾನ್ ಪ್ಲೇಸ್‌ಗೆ ಸುಸ್ವಾಗತ. ನಾನು ಇಂದು ತಾಲಿಬಾನ್‌ನೊಂದಿಗೆ ಮಜಾರ್-ಎ-ಷರೀಫ್‌ನಲ್ಲಿ ಇದ್ದೇನೆ. ನಾನು ಇಲ್ಲಿ ಕೆಲವು ಗಮನಾರ್ಹ ಬಂದೂಕುಗಳೊಂದಿಗೆ ಕುಳಿತಿದ್ದೇನೆ. ಇವುಗಳನ್ನು ಅವರು “ಅಡಿಪೋಲಿ ಬಂದೂಕುಗಳು, ಎಂದು ಕರೆಯುತ್ತಾರೆ. ಅಥವಾ ಅಬ್ಬರದ ಬಂದೂಕುಗಳು, ಮತ್ತು ಅವರು ನಿಜವಾಗಿಯೂ ಹೆಸರಿಗೆ ತಕ್ಕಂತೆ ಬದುಕುತ್ತಾರೆ ಎಂದು ಯಾಸೀನ್ ಹೇಳಿದ್ದಾರೆ.