ಮುಂಬೈನಲ್ಲಿ ಇತ್ತೀಚೆಗೆ ಜಾಗ್ವಾರ್ ಎಕ್ಸ್‌ಜೆ ಮಾದರಿಯ ಕಾರು ಚಾಲಕ ಸಡನ್ ಬ್ರೇಕ್ ಹಾಕಿದ ಪರಿಣಾಮ ರಸ್ತೆ ಹಂಪ್ ನಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ವಾಹನವನ್ನು ಮೇಲೆತ್ತಿದ ಘಟನೆ ಕುರ್ಲಾದ ಫೀನಿಕ್ಸ್ ಮಾರ್ಕೆಟ್ ಸಿಟಿಯ ಹೊರಗೆ ನಡೆದಿದೆ.
ಕಾರು ಚಾಲಕ ಕಾರನ್ನು ತೆಗೆಯಲು ಪ್ರಯತ್ನಿಸುತ್ತಿದ್ದನಾದರೂ ವಿಫಲವಾದ ನಂತರ ಮುಂಬೈನ ಸ್ಥಳೀಯರು ಚಾಲಕನ ನೆರವಿಗೆ ಧಾವಿಸಿದ ಸನ್ನಿವೇಶವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು ಇನ್ಸ್ಟಾಗ್ರಾಮ್ ರೀಲ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಒಂದೆಡೆ ರಸ್ತೆಯ ದುಸ್ಥಿತಿಯನ್ನು ತೋರಿಸುತ್ತಿದ್ದರೂ, ಮತ್ತೊಂದೆಡೆ ಮಾನವೀಯತೆಯನ್ನು ಮೆರೆದ ಮುಂಬೈಗರನ್ನು ಪ್ರಶಂಸಿಸಲಾಗುತ್ತಿದೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ “ಭಾರತೀಯ ರಸ್ತೆಗಳು ಯಾವಾಗ ಸರಿಹೋಗುತ್ತವೆ. ಐಷಾರಾಮಿ ರಸ್ತೆಗಳಾಗಿ ಇನ್ಯಾವಾಗ ಮಾರ್ಪಡಿಸಲಾಗುತ್ತದೆ” ಎಂಬಂತಹ ಕಮೆಂಟ್ ಗಳು ಸಾಕಷ್ಟು ಬಂದವು.
ಇನ್‌ಸ್ಟಾಗ್ರಾಮರ್ ಸಿದ್ ಶರ್ಮಾ ರಸ್ತೆಗಳ ಸ್ಥಿತಿಯನ್ನು ಪ್ರಶ್ನಿಸಿದ್ದು, ಮುಂಬೈ ಜನರ ನೆರವಿನ ಮನೋಭಾವವನ್ನು ಪ್ರಶಂಸಿಸಿದ್ದಾರೆ. ಹಾಗೂ ಎಂತಹ ಸನ್ನಿವೇಶದಲ್ಲೂ ಮುಂಬೈ ಜನರು ನಿಮಗೆ ಸಹಾಯ ಮಾಡುತ್ತಾರೆ. ನೀವು ಅವರನ್ನು ಪ್ರೀತಿಸಿದರೆ, ಅವರು ನಿಮ್ಮನ್ನು ಗೌರವಿಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
https://youtu.be/s-Yr2FlJSkc