ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿದ್ದು ತೆಲಂಗಾಣದ ಈ ಪಟ್ಟಣದ ಜನತೆ ಮಾತ್ರ ಮಳೆ ಜೊತೆ ಬಂದ ಮೀನನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇಂಥದೊಂದು ಘಟನೆ ಜಗ್ತಿಲ್ ಪಟ್ಟಣದಲ್ಲಿ ಶುಕ್ರವಾರ ಹಾಗೂ ಶನಿವಾರದಂದು ನಡೆದಿದೆ.
ಮಳೆ ಜೊತೆ ಮೀನುಗಳು ಸಹ ಕೆಳಗೆ ಬಿದ್ದಿದ್ದು ಇದನ್ನು ಆರಿಸಿಕೊಂಡ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗಳು ಈಗ ವೈರಲ್ ಆಗಿವೆ.
ಇಷ್ಟಕ್ಕೂ ಹೀಗೆ ಮಳೆ ಜೊತೆ ಮೀನು ಬೀಳಲು ಅಪರೂಪದ ಹವಾಮಾನ ವಾತಾವರಣ ಕಾರಣವೆಂದು ಹೇಳಲಾಗಿದ್ದು, ಇದಕ್ಕೆ ‘ರೈನ್ ಆಫ್ ಅನಿಮಲ್ಸ್’ ಎಂದು ಕರೆಯುತ್ತಾರೆ. ಇಂತಹ ಹವಾಮಾನವಿದ್ದ ಸಂದರ್ಭದಲ್ಲಿ ಏಡಿ, ಸಣ್ಣ ಮೀನುಗಳು, ಕಪ್ಪೆ ಮೊದಲಾದವು ನೀರಿನ ಚಿಲುಮೆ ಮೂಲಕ ಆಕಾಶಕ್ಕೆ ಚಿಮ್ಮುತ್ತವೆ.
ತನ್ನೊಂದಿಗೆ ಈ ಪ್ರಾಣಿಗಳನ್ನು ತೆಗೆದುಕೊಂಡ ಹೋದ ನೀರಿನ ಚೆಲುವೆ ತನ್ನ ಪ್ರಭಾವ ಕಳೆದುಕೊಂಡ ಸಂದರ್ಭದಲ್ಲಿ ಮಳೆಯ ಮೂಲಕ ನೆಲಕ್ಕೆ ಬೀಳುತ್ತವೆ ಎಂದು ಹೇಳಲಾಗಿದೆ.