ರಸ್ತೆಯ ಸೈಡ್ ವಾಕ್ ಮೇಲೆ ನಿಂತಿದ್ದ ಮಹಿಳೆಯ ಸ್ಮಾರ್ಟ್‌ಫೋನನ್ನು ಕಸಿದ ಓಡಿ ಹೋಗುತ್ತಿದ್ದನ ಸೈಕಲ್ ಸವಾರನೊಬ್ಬನಿಗೆ ಸ್ಥಳದಲ್ಲೇ ಕರ್ಮದೇಟು ಬಿದ್ದ ವಿಡಿಯೋವೊಂದು ವೈರಲ್ ಆಗಿದೆ.
ಮಹಿಳೆಯ ಕೈಲಿದ್ದ ಫೋನ್ ಕಸಿದು ಓಡಿ ಹೋಗಲು ಯತ್ನಿಸಿದ ಕಳ್ಳನಿಗೆ ಎದುರಿನಿಂದ ಬಂದ ಕಾರೊಂದು ಗುದ್ದಿದ ಪರಿಣಾಮ ಆತ ಅಲ್ಲೇ ಕುಸಿದು ಬೀಳುತ್ತಾನೆ. ಕೂಡಲೇ ಎದ್ದು ಓಡಿಹೋಗಲು ಯತ್ನಿಸಿದರೂ ಸಹ ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ ಆತನಿಗೆ ಒದ್ದು, ಕೂಡಲೇ ಸ್ಥಳದಲ್ಲಿದ್ದ ಇನ್ನಿತರರು ಸುತ್ತುವರೆಯುತ್ತಾರೆ.
’ಕರ್ಮ ವೀಡಿಯೋಸ್’ ಹೆಸರಿನ ಹ್ಯಾಂಡಲ್ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದೆ.