
ಡಕ್ವರ್ತ್ ನಿಯಮದ ಪ್ರಕಾರ ಟೀಂ ಇಂಡಿಯಾ ವನಿತೆಯರ ತಂಡ ಈ ಪಂದ್ಯದಲ್ಲಿ ಸೋಲನ್ನ ಅನುಭವಿಸಿದೆ. ಆದರೂ ಸಹ 18.5ನೇ ಓವರ್ನ ಸಂದರ್ಭದಲ್ಲಿ ಇಂಗ್ಲೆಂಡ್ ವನಿತೆಯರ ತಂಡದ ಆಟಗಾರ್ತಿ ಜೋನ್ಸ್ ಬಾರಿಸಿದ ಚೆಂಡು ಇನ್ನೇನು ಸಿಕ್ಸರ್ ಆಗಬೇಕು ಅನ್ನೋವಷ್ಟರಲ್ಲಿ ಅದನ್ನ ಹಿಡಿದರು. ಆದರೆ ಸಮತೋಲನ ತಪ್ಪಿದ ಕಾರಣ ಚೆಂಡನ್ನ ಹಾರಿಸಿದ ಹರ್ಲೀನ್ ಮತ್ತೊಮ್ಮೆ ಅದೇ ಚೆಂಡನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅದ್ಭುತ ಕ್ಯಾಚ್ ಇದೀಗ ವಿಶ್ವ ಮಟ್ಟದಲ್ಲಿ ಭಾರೀ ಸುದ್ದಿ ಮಾಡ್ತಿದೆ.