ತನ್ನ ತಾಯ್ನಾಡಿನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಜಪಾನಿನ ಅಪರ್ ಫ್ಯೂಜಿ ಕೇಜ್ ಅವರ ಅದೊಂದು ಹಾಡು ಭಾರತೀಯರ ಮೆಚ್ಚುಗೆ ಗಳಿಸಿದೆ. ಅಕ್ಟೋಬರ್ 9 ರಂದು ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಫ್ಯೂಜಿ ಕೇಜ್ ಅವರ “ಗ್ರೇಸ್” ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಶ್ವದಾದ್ಯಂತ ಭಾರತೀಯ ಪ್ರೇಕ್ಷಕರನ್ನು ಸೆಳೆದಿದೆ.
ಇದಕ್ಕೆ ಕಾರಣವಾಗಿದ್ದು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಿಡಿಯೋ ಇದಾಗಿದ್ದು ಹಾಡಿನ ಸಂಪೂರ್ಣ ಭಾಗವನ್ನ ಉತ್ತರಖಂಡದಲ್ಲಿ ಚಿತ್ರೀಕರಿಸಿರುವುದು ವಿಶೇಷ.
ವೀಡಿಯೊ ಸಂತೋಷದಾಯಕ ಮನಸ್ಥಿತಿಯನ್ನು ಹೊಂದಿದೆ. ನಮ್ಮ ಜೀವನದಲ್ಲಿ ನಾವು ಹೊಂದಿರುವ ಅನುಗ್ರಹಕ್ಕಾಗಿ ಕೃತಜ್ಞರಾಗಿರಬೇಕು ಎಂಬ ಹಾಡಿನ ಸಾಹಿತ್ಯವನ್ನು ಪ್ರತಿಬಿಂಬಿಸುತ್ತದೆ.
ಬಿಡುಗಡೆಯಾದ ಒಂದು ತಿಂಗಳೊಳಗೆ ಹಾಡು ಯೂಟ್ಯೂಬ್ನಲ್ಲಿಯೇ 10 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಹಾಡು ವಿವಿಧ ವೇದಿಕೆಗಳಲ್ಲಿ ಸದ್ದು ಮಾಡುತ್ತಿದೆ.