ಗ್ರಾಮೀಣ ಭಾಗದಲ್ಲಿ ಇಂದಿಗೂ ಸಗಣಿ ಬೆರಣಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಬೆರಣಿ ತಟ್ಟುವುದೂ ಸಹ ಒಂದು ಕೌಶಲವೇ. ಈ ಕೆಲಸ ಮಾಡುವ ಅನೇಕ ಮಹಿಳೆಯರು ತಮ್ಮ ಕೌಶಲ್ಯಕ್ಕಾಗಿ ಮೆಚ್ಚುಗೆ ಪಡೆಯುವುದಿಲ್ಲ. ಆದರೆ, ಇತ್ತೀಚೆಗಷ್ಟೇ ಐಎಎಸ್ ಅಧಿಕಾರಿಯೊಬ್ಬರು ಮಾಡಿರುವ ಟ್ವಿಟ್ ಅಂತಹ ಕೌಶಲ್ಯವನ್ನು ತೋರಿಸುತ್ತದೆ. ಮತ್ತು ನೆಟ್ಟಿಗರನ್ನು ಅಚ್ಚರಿಗೆ ದೂಡಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಮಹಿಳೆಯೊಬ್ಬರು ಹಸುವಿನ ಸಗಣಿಯನ್ನು ಒಣಗಿಸಲು ಬೆರಣಿ ತಟ್ಟಿ ಗೋಡೆಯ ಮೇಲೆ ಎಸೆಯುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆಕೆಯ ಎಸೆತ ಎಷ್ಟು ನಿಖರವೆಂದರೆ, ನೇರವಾಗಿ ಗುರಿ ಇಟ್ಟ ಕಡೆ ನಿರ್ದಿಷ್ಟ ಸ್ಥಳದಲ್ಲಿ ಗೋಡೆ ಮೇಲೆ ಅಂಟಿಕೊಳ್ಳುತ್ತದೆ.
ಈ 15-ಸೆಕೆಂಡ್ ಕ್ಲಿಪ್ ಶೇರ್ ಮಾಡುವಾಗ “ಭಾರತೀಯ ಬಾಸ್ಕೆಟ್ ಬಾಲ್ ತಂಡವು ಆಕೆಯನ್ನು ಹುಡುಕುತ್ತಿದೆ’ ಎಂದು ಶೀರ್ಷಿಕೆ ಬರೆದಿದ್ದಾರೆ. ಈ ವಿಡಿಯೋ ಒಂದು ದಿನದಲ್ಲಿ 1.1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತು ಮತ್ತು 38,000ಕ್ಕೂ ಹೆಚ್ಚು ಲೈಕ್ ಪಡೆಯಿತು. ಮಹಿಳೆಯ ಕೌಶಲ್ಯ ಅನೇಕ ನೆಟ್ಟಿಗರನ್ನು ಆಶ್ಚರ್ಯಚಕಿತಗೊಳಿಸಿದೆ. ಆದರೆ, ಕೆಲವರು ಶರಣ್ ಟ್ವೀಟ್ ಅನ್ನು ಟೀಕಿಸಿ ಬಡತನವನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.