ಚೀನಾ: ಕಳೆದ ವರ್ಷ ನೋಯ್ಡಾದಲ್ಲಿನ ಸೂಪರ್‌ಟೆಕ್‌ನ ಅವಳಿ ಗೋಪುರಗಳು ಸೆಕೆಂಡುಗಳಲ್ಲಿ ನೆಲಸಮವಾಗುವುದನ್ನು ನಾವು ನೋಡಿದ್ದೇವೆ. ಇದೀಗ ಇದೇ ಮಾದರಿಯಲ್ಲಿ ಚೀನಾದಲ್ಲಿನ ಅಪೂರ್ಣ ಕಟ್ಟಡಗಳನ್ನು 2021 ರಲ್ಲಿ ಕೆಡವಲಾದ ವಿಡಿಯೋ ವೈರಲ್ ಆಗಿದೆ.
ಟ್ವಿಟರ್ ನಲ್ಲಿ ಹಂಚಲಾದ ಒಂದು ನಿಮಿಷದ ವಿಡಿಯೋದಲ್ಲಿ ಹಲವಾರು ಕಟ್ಟಡಗಳನ್ನು ನೆಲಸಮ ಮಾಡುವುದನ್ನು ನೋಡಬಹುದು. ಬಹುಮಹಡಿ ಕಟ್ಟಡಗಳು ಕ್ಷಣಾರ್ಧದಲ್ಲಿ ಕುಸಿದು ಬೀಳುವುದನ್ನು ಕಾಣಬಹುದು. ಇವೆಲ್ಲವೂ ಅಪೂರ್ಣ ಕಟ್ಟಡಗಳಾಗಿವೆ.
ಕಟ್ಟಡವು ಕೆಲವೇ ಸೆಕೆಂಡುಗಳಲ್ಲಿ ಬೀಳುವ ವೈಮಾನಿಕ ದೃಶ್ಯಗಳನ್ನು ವೀಡಿಯೊ ಹೊಂದಿದೆ. ಆಗಸ್ಟ್ 27, 2021 ರಂದು ಈ ಘಟನೆ ನಡೆದಿದೆ. ಚೀನಾದ ನೈಋತ್ಯ ನಗರವಾದ ಕುನ್ಮಿಂಗ್‌ನಲ್ಲಿ 14 ಕಟ್ಟಡಗಳು ಕುಸಿದಿರುವುದನ್ನು ವೈಮಾನಿಕ ತುಣುಕು ತೋರಿಸಿದೆ. ಪರಿಸರದ ಬಗ್ಗೆ ಕಾಳಜಿಯಿಂದಾಗಿ ಹೀಗೆ ಮಾಡಲಾಗಿದೆ ಎಂದು ಚೀನಾ ಸರ್ಕಾರ ಸ್ಪಷ್ಟನೆ ಕೊಟ್ಟಿದ್ದು, ಈ ಬಗ್ಗೆ ಇನ್ನೂ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ.
https://twitter.com/fasc1nate/status/1628279588567543809?ref_src=twsrc%5Etfw%7Ctwcamp%5Etweetembed%7Ctwterm%5E162827958856
https://twitter.com/fasc1nate/status/1628279588567543809?ref_src=twsrc%5Etfw%7Ctwcamp%5Etweetembed%7Ctwterm%5E1628518087065759744%7Ctwgr%5E3e3bdfc5f761724267475437601adf668c3825d0%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-in-china-unfinished-high-rises-demolished-in-seconds-7151593.html
https://twitter.com/fasc1nate/status/1628279588567543809?ref_src=twsrc%5Etfw%7Ctwcamp%5Etweetembed%7Ctwterm%5E1628328252241743872%7Ctwgr%5E3e3bdfc5f761724267475437601adf668c3825d0%7Ctwcon%5Es2_&ref_url=https%3A%2F%2Fwww.news18.com%2Fbuzz%2Fwatch-in-china-unfinished-high-rises-demolished-in-seconds-7151593.html