ಅಮೆರಿಕದ ಮೇರಿಲ್ಯಾಂಡ್ ಬಾಲ್ಟಿಮೋರ್ ಬಂದರನ್ನು ದಾಟುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಸರಕು ಹಡಗು ಸೇತುವೆಗೆ ಡಿಕ್ಕಿ ಹೊಡೆದಿದ್ದು, ಧಿಡೀರ್ ಆಗಿ ಕುಸಿದು ಬಿದ್ದಿದೆ. ಬಾಲ್ಟಿಮೋರ್ ಸೇತುವೆ ಕುಸಿತದ ಕ್ಷಣದ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಅಮೆರಿಕಾದ ಬಾಲ್ಟಿಮೋರ್ನ ನಗರದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ‘ಫ್ರಾನ್ಸಿಸ್ ಸ್ಕಾಟ್ ಕಿ ಬ್ರೀಡ್ಜ್’ ಸೇತುವೆಗೆ ಮಂಗಳವಾರ ಬೆಳಗ್ಗೆ ಸಿಂಗಾಪುರ ಧ್ವಜ ಇರುವ ಕಂಟೈನರ್ ಹಡಗು ಡಾಲಿಯಿಂದ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಡಿಕ್ಕಿ ಹೊಡೆದಿದೆ. ಸೇತುವೆಯ ಒಂದು ಭಾಗಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ಕೇವಲ 10 ಸೆಕೆಂಡುಗಳಲ್ಲಿ ಸಂಪೂರ್ಣ ಸೇತುವೆ ನದಿಗೆ ಉರುಳಿದೆ. ಸೇತುವೆ ಕುಸಿತದ ಕ್ಷಣದ ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮುಂಜಾನೆ 1:30 ರ ಸುಮಾರಿಗೆ ಬಾಲ್ಟಿಮೋರ್ನ ಕೀ ಸೇತುವೆಗೆ ಹಡಗು ಡಿಕ್ಕಿ ಹೊಡೆದಿದೆ ಎಂದು ಹಲವು ಕರೆಗಳು ಬಂದವು. ನದಿಯಲ್ಲಿರುವ ಏಳು ಜನರಿಗಾಗಿ ನಾವು ಶೋಧ ನಡೆಸುತ್ತಿದ್ದೇವೆ” ಎಂದು ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಸಂವಹನ ನಿರ್ದೇಶಕ ಕೆವಿನ್ ಕಾರ್ಟ್ರೈಟ್ ತಿಳಿಸಿದ್ದಾರೆ.