ಚಿತ್ರರಂಗದಿಂದ ಹೆಚ್ಚು ಪ್ರಭಾವಿತರಾದವರು ತಮ್ಮ ಆಲೋಚನೆಯನ್ನು ಚಿತ್ರರಂಗದ ಧಾಟಿಯಲ್ಲೇ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸುವುದನ್ನು ಕಾಣಬಹುದು. ಈಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ನಗು ತರಿಸುತ್ತಿದ್ದು, ಎರಡು ಚಿತ್ರಗಳನ್ನು ಹೋಲಿಕೆ ಮಾಡಿ ಪ್ರಸ್ತುತಪಡಿಸಿರುವ ರೀತಿ ನಿಜಕ್ಕೂ ವಿಶೇಷವಾದದ್ದು.
ಬ್ರಹ್ಮಾಸ್ತ್ರ ಮತ್ತು ಆದಿಪುರುಷ ಚಿತ್ರಗಳು ಸದ್ಯದ ಟ್ರೆಂಡ್. ಇದನ್ನೇ ಆಧಾರವಾಗಿಟ್ಟುಕೊಂಡು ವಿಡಿಯೋ ಪ್ರಸ್ತುಪಡಿಸಲಾಗಿದೆ.
ವ್ಯಕ್ತಿಯೊಬ್ಬರು ಸ್ಟೇಜ್ನಲ್ಲಿ ರೋಚಕ ಪ್ರದರ್ಶನ ನೀಡುವುದನ್ನು ಕಾಣಬಹುದು. ಇದೇ ವೇಳೆ ಪ್ರೇಕ್ಷಕನೊಬ್ಬ ಪ್ರದರ್ಶನ ಕಂಡು ತಾನು ಅನುಕರಿಸಲು ವೇದಿಕೆಗೇರಿ ಪ್ರಯತ್ನಿಸುವ ಆದರೆ ದಯನೀಯವಾಗಿ ವಿಫಲವಾಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋಗೆ ಟೆಕ್ಸ್ಟ್ನಲ್ಲಿ ಬ್ರಹ್ಮಾಸ್ತ್ರ ವಿಎಫ್ ಎಕ್ಸ್ ಟೀಂ ಮತ್ತು ಆದಿಪುರುಷ ವಿಎಫ್ ಎಕ್ಸ್ ಹೋಲಿಕೆ ಮಾಡಿ ವಿಡಿಯೋ ಹರಿಯಬಿಡಲಾಗಿದೆ.
ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ಅಭಿನಯದ ಆದಿಪುರುಷ ಚಿತ್ರದ ಟೀಸರ್ ಅನ್ನು ಅಯೋಧ್ಯೆಯಲ್ಲಿ ನಡೆದ ಮೆಗಾ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಚಿತ್ರವು ಹಿಂದೂ ಪೌರಾಣಿಕ ಮಹಾಕಾವ್ಯ ರಾಮಾಯಣವನ್ನು ಆಧರಿಸಿದೆ ಮತ್ತು ಇದರಲ್ಲಿ ಪ್ರಭಾಸ್ ರಾಮನ ಪಾತ್ರವನ್ನು ನಿರ್ವಹಿಸಲಿದ್ದಾರೆ ಮತ್ತು ಸೈಫ್ ಅಲಿಖಾನ್ ಲಂಕೇಶನ ಪಾತ್ರವನ್ನು ನಿರ್ವಹಿಸಲಿದ್ದಾರೆ. ನಟಿ ಕೃತಿ ಸನೋನ್ ಸೀತೆಯ ಪಾತ್ರ ಮಾಡುತ್ತಿದ್ದಾರೆ.
ಟೀಸರ್ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ಟ್ವಿಟರ್ನಲ್ಲಿ ನಿರಾಶೆಯ ಟ್ರೆಂಡಿಂಗ್ ಪ್ರಾರಂಭವಾಯಿತು. ರಾವಣನಾಗಿ ಸೈಫ್ನ ನೋಟ ಕಂಡು ಜನರು ಗೇಲಿ ಮಾಡಿದ್ದಾರೆ. ಸೈಫ್ ಈ ಚಿತ್ರದಲ್ಲಿ ಅಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ನಟಿಸುತ್ತಾರಾ ಎಂದು ನೆಟ್ಟಿಗರು ಪ್ರಶ್ನಿಸಲು ಪ್ರಾರಂಭಿಸಿದರು.
ಪ್ರಭಾಸ್ ಅವರ ವೃತ್ತೀಜಿವನದಲ್ಲಿ ಆದಿಪುರುಷ ದೊಡ್ಡ ಚಿತ್ರ ಎಂದು ಪರಿಗಣಿಸಲಾಗಿದೆ. 300 ಕೋಟಿ ಬಜೆಟ್ನಲ್ಲಿ ತಯಾರಾದ ಪೌರಾಣಿಕ ಚಿತ್ರ ಇದಾಗಿದೆ. ಈ ಚಿತ್ರವನ್ನು ಭೂಷಣ್ ಕುಮಾರ್ ಅವರ ಟಿ-ಸೀರೀಸ್ ಮತ್ತು ರೆಟ್ರೋ ಸ್ಟೈಲ್ಸ್ ಜಂಟಿಯಾಗಿ ನಿರ್ಮಿಸಿದ್ದಾರೆ. ಇದು 2023ರ ಜನವರಿ 12ರಂದು ಚಿತ್ರಮಂದಿರಗಳಿಗೆ ಬರಲಿದೆ.
https://twitter.com/HaramiParindey/status/1577239979893624832?ref_src=twsrc%5Etfw%7Ctwcamp%5Etweetembed%7Ctwterm%5E1577239979893624832%7Ctwgr%5E8fee003b885b2619826b92c9130e3f0b14b6a144%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-hilarious-video-draws-comparison-between-brahmastra-and-adipurushs-vfx-6104191.html