alex Certify ಮೈ ನವಿರೇಳಿಸುವ ಸಾಹಸ ದೃಶ್ಯಗಳ ವಿಡಿಯೋ ಹಂಚಿಕೊಂಡ ಉದ್ಯಮಿ…!​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈ ನವಿರೇಳಿಸುವ ಸಾಹಸ ದೃಶ್ಯಗಳ ವಿಡಿಯೋ ಹಂಚಿಕೊಂಡ ಉದ್ಯಮಿ…!​

ಕೆಲವರಿಗೆ ಸಾಹಸ ಮಾಡುವ ಹುಚ್ಚು. ತಮ್ಮ ಪ್ರಾಣವನ್ನು ಪಣಕ್ಕಿಟ್ಟಾದರೂ ಸಾಹಸ ಕಾರ್ಯದಲ್ಲಿ ತೊಡಗುತ್ತಾರೆ. ಕೆಲವೊಮ್ಮೆ ಇದು ಪ್ರಾಣವನ್ನೂ ಪಡೆದುಕೊಂಡದ್ದಿದೆ.

ನೋಡುಗರ ಮೈ ಝುಂ ಎನಿಸುವ ಕೆಲವು ಅಪಾಯಕಾರಿ ಸ್ಟಂಟ್​ಗಳ ಕುರಿತು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಟ್ವಿಟರ್‌ನಲ್ಲಿ ಶೇರ್​ ಮಾಡಿಕೊಂಡಿದ್ದು, ಈ ಸ್ಟಂಟ್​ಗಳು ಇದೀಗ ವೈರಲ್​ ಆಗಿವೆ.

ಚಲಿಸುವ ಕಾರುಗಳಿಂದ ಜಿಗಿದ ನಂತರ ಜನರು ಸುರಕ್ಷಿತವಾಗಿ ಇಳಿಯುವ ಮೈ ರೋಮಾಂಚನಗೊಳ್ಳುವ ದೃಶ್ಯವೊಂದು ಈ ಸ್ಟಂಟ್​ನಲ್ಲಿ ಇದೆ.

ಮಾತ್ರವಲ್ಲದೇ, ರಷ್ಯಾದ ಸ್ಟಂಟ್‌ಮ್ಯಾನ್ ಒಬ್ಬರು “ಮಾನವ ಬುಲೆಟ್” ನಂತೆ ಕಾರಿನ ಮೂಲಕ ಹಾರುತ್ತಿರುವುದನ್ನು ನೋಡಬಹುದು. ಕಾರುಗಳು ಡಿಕ್ಕಿ ಹೊಡೆದು ನದಿಗಳಲ್ಲಿ ಇಳಿಯುವ ಇತರ ದೃಶ್ಯಗಳೂ ಈ ವಿಡಿಯೋದಲ್ಲಿ ಇವೆ.

ಈ ಸಾಹಸಗಳನ್ನು ಯಾರು ಪ್ರದರ್ಶಿಸಿದರು ಅಥವಾ ಅವುಗಳನ್ನು ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂದು ಗೋಯೆಂಕಾ ಅವರು ಉಲ್ಲೇಖಿಸಿಲ್ಲ.

ಅಚ್ಚರಿ ಹಾಗೂ ಭಯಾನಕ ಎನಿಸುವ ಈ ವಿಡಿಯೋಗಳನ್ನು ಇದಾಗಲೇ 23 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...