ಅಮ್ಮ-ಮಗು ಈ ಎರಡು ಜೀವಗಳ ಬಗ್ಗೆ ಪದಗಳಲ್ಲಿ ಹೇಳುವುದು ಅಸಾಧ್ಯ. ಹೆತ್ತ ಕರುಳಿಗೆ ಏನಾದ್ರೂ ಆದರೆ ಮೊದಲು ರಕ್ಷಣೆಗೆ ನಿಲ್ಲೋದೆ ಅಮ್ಮ. ಅದೇ ರೀತಿ ಮಗುವಿಗೆ ಅಮ್ಮನೇ ಸರ್ವಸ್ವ ಆಗಿರ್ತಾಳೆ. ಅದು ಮನುಷ್ಯ ಆದರೂ ಅಷ್ಟೆ, ಪ್ರಾಣಿಯಾದರೂ ಅಷ್ಟೆ.
ಮನುಷ್ಯರಾದ್ರೆ ಅವರು ಮಾತುಗಳಲ್ಲಿ ಹೇಳಿಕೊಳ್ತಾರೆ, ಪ್ರಾಣಿಗಳಿಗೂ ತಮ್ಮ ಮರಿಗಳ ಬಗ್ಗೆ ಅದೇ ರೀತಿ ಪ್ರೀತಿ, ಭಾವನೆಗಳು ಇರುತ್ತೆ. ಅನೇಕ ಬಾರಿ ನಾವು ಅಂಥಹ ದೃಶ್ಯಗಳನ್ನ ನಾವು ಕಣ್ತುಂಬ ನೋಡಿ ಖುಷಿ ಪಟ್ಟಿರ್ತೆವೆ. ಆದರೆ ಇತ್ತಿಚೆಗೆ ವೈರಲ್ ಆಗಿರೋ ತಾಯಿಗೆ ಹೆತ್ತ ಕರುಳ ಮೇಲೆ ಎಷ್ಟು ಪ್ರೀತಿ ಅನ್ನೋದಕ್ಕೆ ಸಾಕ್ಷಿ ಸಿಕ್ಕಂತಿತ್ತು. ಆ ಒಂದು ದೃಶ್ಯ, ಮನಕಲಕುವ ಹಾಗಿತ್ತು.
ನೋಡಿ….. ಇದೇ ಆ ವಿಡಿಯೋ…… ತಾಯಿ ಆನೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿದ ತನ್ನ ಕರುಳಬಳ್ಳಿಯನ್ನ ಹೇಗೆ ಸೊಂಡಿಲಿನಿಂದ ಎಳೆದುಕೊಂಡು ಹೋಗ್ತಿದೆ. ತಾಯಿ ಆನೆ ಹೀಗೆ 7 ಕಿ.ಮೀಟರ್ ವರೆಗೂ ಎಳೆಯುತ್ತಾ, ಹೊತ್ತಿಕೊಂಡು ಹೋಗಿದೆ. ಈ ಘಟನೆ ನಡೆದಿರೋದು ಪಶ್ಚಿಮ ಬಂಗಾಳದಲ್ಲಿ. ಇಲ್ಲಿನ ಅರಣ್ಯ ವ್ಯಾಪ್ತಿಯಲ್ಲಿರುವ ಜಲಪೈಗುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಛುನಾಭಟಿ ಟೀ ತೋಟದ, ಬನಾರತ್ ಬ್ಲಾಕ್‌ನಲ್ಲಿ ಈ ದೃಶ್ಯ ಕಂಡುಬಂದಿದೆ.
ಕೇವಲ ತಾಯಿ ಆನೆಯೊಂದೇ ಅಲ್ಲ, ಈ ತಾಯಿ ಆನೆಗೆ ಉಳಿದ ಆನೆಗಳು ಸಹ ಸಾಥ್ ಕೊಟ್ಟಿವೆ. ಹೀಗೆ ತಾಯಿ ಆನೆ, ಸತ್ತ ಮರಿ ಆನೆ ದೇಹ ಒಯ್ಯುತ್ತಿರುವಾಗ 35ಕ್ಕೂ ಹೆಚ್ಚು ಆನೆಗಳು ಜೊತೆಯಲ್ಲಿದ್ದವು. ಈ ಒಂದು ದೃಶ್ಯ ನೋಡ್ತಿದ್ರೆ, ಪ್ರಾಣಿಗಳು ಮನುಷ್ಯರಿಗಿಂತಲೂ ಹೆಚ್ಚಾಗಿ ಸಂಬಂಧಗಳಿಗೆ ಬೆಲೆ ಕೊಡುತ್ತೆ ಅನ್ನೋದಕ್ಕೆ ಸಾಕ್ಷಿ ಸಿಕ್ಕಂತಿತ್ತು.