ತನಗೆ ವಂಚಿಸಿ ಬೇರೊಬ್ಬಳೊಂದಿಗೆ ಲಲ್ಲೆ ಹೊಡೆಯುತ್ತಿದ್ದ ಬಾಯ್‌ಫ್ರೆಂಡ್ ಅನ್ನು ಯುವತಿಯೊಬ್ಬಳು ರೆಡ್ ಹ್ಯಾಂಡ್ ಆಗಿ ಹಿಡಿದ ವಿಡಿಯೋ ವೈರಲ್ ಆಗಿದೆ. ಬೇರೊಬ್ಬ ಹುಡುಗಿಯೊಂದಿಗೆ ಡಿನ್ನರ್ ಡೇಟ್ ಎಂಜಾಯ್ ಮಾಡುತ್ತಿರುವ ಪುರುಷನಿಗೆ ಆತನ ಸಂಗಾತಿಗೆ ಈ ವಿಚಾರ ರೆಡ್ ಹ್ಯಾಂಡ್ ಆಗಿ ತಿಳಿದ ಬಳಿಕ ಆತನ ಜೀವನವೇ ಮೇಲು ಕೆಳಗಾದಂತೆ ಭಾಸವಾಗುತ್ತದೆ.
ತನ್ನ ಬಾಯ್‌ಫ್ರೆಂಡ್ ಈ ಸಲ್ಲಾಪವನ್ನು ನೋಡುತ್ತಲೇ ಯುವತಿಯು ಆತನಿಗೆ ಬೀದಿಯಲ್ಲೇ ಕಪಾಳಮೋಕ್ಷ ಮಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.
ರಸ್ತೆ ಬದಿಯ ಈಟರಿಯೊಂದರಲ್ಲಿ ಗೆಳತಿಯೊಂದಿಗೆ ಡಿನ್ನರ್ ಎಂಜಾಯ್ ಮಾಡುತ್ತಿರುವ ಈ ಪುರುಷ ಆಕೆಗೆ ಸನಿಹವಾಗುತ್ತಿರುವ ವೇಳೆಯಲ್ಲೇ ಆ ಜಾಗಕ್ಕೆ ಬಂದ ಎಸ್‌ಯುವಿಯೊಂದು ಅಲ್ಲಿ ನಿಲ್ಲುತ್ತದೆ. ಅದರಿಂದ ಹೊರಗೆ ಬರುವ ಆತನ ಗರ್ಲ್‌ಫ್ರೆಂಡ್ ಈ ದೃಶ್ಯವನ್ನ ಕಂಡ ಕೂಡಲೇ ಆತನತ್ತ ಚೇರ್ ಎಸೆದು ಆತನ ಮುಖಕ್ಕೆ ಸಾಸ್ ಎರಚಿ ತನ್ನ ಸಿಟ್ಟು ಕಾರಿಕೊಳ್ಳುವುದನ್ನು ಕಾಣಬಹುದಾಗಿದೆ.
ಈ ಜೋಡಿಗೆ ಮದುವೆಯಾಗಿತ್ತೋ ಅಥವಾ ಇನ್ನೂ ಡೇಟಿಂಗ್ ಹಂತದಲ್ಲೇ ಇಂಥ ಒಂದು ಘಟನೆ ನಡೆಯಿತೋ ಎಂಬುದು ಇನ್ನೂ ತಿಳಿದು ಬಂದಿಲ್ಲ.
https://youtu.be/k9UYnK69c2Y