ಕೋವಿಡ್ ಸೋಂಕಿನ ಕಾರಣದಿಂದಾಗಿ ಬಹುತೇಕ ಎರಡು ವರ್ಷಗಳ ಕಾಲ ಆನ್ಲೈನ್ ಕ್ಲಾಸ್‌ನಲ್ಲೇ ಪಾಠ ಕೇಳಿಕೊಂಡು ಇದೀಗ ದೈಹಿಕವಾಗಿ ಶಾಲೆಗಳಿಗೆ ಮರಳುತ್ತಿದ್ದಾರೆ ವಿದ್ಯಾರ್ಥಿಗಳು.
ದೆಹಲಿಯ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮರಳುತ್ತಿರುವ ವಿಚಾರವನ್ನು ವರದಿ ಮಾಡುತ್ತಿದ್ದ ವರದಿಗಾರ್ತಿ ರೂಪಶ್ರೀ ನಂದಾ, ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಕಣ್ಣೀರು ಹಾಕುತ್ತಿರುವುದನ್ನು ಗಮನಿಸಿ ಆಕೆಯನ್ನು, “ನೀನೇಕೆ ಕಣ್ಣೀರು ಹಾಕುತ್ತಿರುವೆ?” ಎಂದು ಪ್ರಶ್ನಿಸಿದ್ದಾರೆ.
ನೋಡಬನ್ನಿ ಕಾಪು ʼಲೈಟ್ ಹೌಸ್ʼ
“ನನ್ನ ಫೋನ್‌ನಲ್ಲಿ ಸಮಸ್ಯೆಯೊಂದು ಇದ್ದ ಕಾರಣದಿಂದ ಆನ್ಲೈನ್ ಕ್ಲಾಸ್‌ನಲ್ಲಿ ಭಾಗಿಯಾದರೂ ಪಾಠಗಳನ್ನು ಅರಿಯುವುದು ಕಷ್ಟವಾಗುತ್ತಿತ್ತು,” ಎಂದು ಸ್ನೇಹಾ ಹೆಸರಿನ ಈ ವಿದ್ಯಾರ್ಥಿನಿ ತನ್ನ ನೋವು ತೋಡಿಕೊಂಡಿದ್ದಾಳೆ. ತನ್ನ ತಂದೆಗೆ ಭಾಗಶಃ ಕಣ್ಣು ಕಾಣದೇ ಇರುವ ಕಾರಣ ತನಗೆ ಹೊಸ ಫೋನ್ ಖರೀದಿ ಮಾಡಲು ಸಾಧ್ಯವಾಗಿಲ್ಲ ಎನ್ನುವ ಸ್ನೇಹಾಳನ್ನು ಸಮಾಧಾನ ಮಾಡಲು ಇತರೆ ವಿದ್ಯಾರ್ಥಿನಿಯರು ಮುಂದೆ ಬಂದ ವಿಚಾರ ನೆಟ್ಟಿಗರ ಹೃದಯ ಗೆಲ್ಲುತ್ತಿದೆ.
ಪರಿಸ್ಥಿತಿಯನ್ನು ಬಹಳ ಗಂಭೀರವಾಗಿ ನಿಭಾಯಿಸಿದ ಪತ್ರಕರ್ತೆಯ ಪ್ರೌಢಿಮೆಯನ್ನು ಕೊಂಡಾಡಿದ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.