alex Certify ಈ OTT ಯಲ್ಲಿ ಸಬ್‌ ಸ್ಕ್ರಿಪ್ಶನ್ ಇಲ್ಲದೆ ಉಚಿತವಾಗಿ ವೀಕ್ಷಿಸಬಹುದು ಸಿನಿಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ OTT ಯಲ್ಲಿ ಸಬ್‌ ಸ್ಕ್ರಿಪ್ಶನ್ ಇಲ್ಲದೆ ಉಚಿತವಾಗಿ ವೀಕ್ಷಿಸಬಹುದು ಸಿನಿಮಾ

OTT ಅಂದರೆ, ಹೊಸ ಹೊಸ ವೆಬ್‌ಸಿರೀಸ್‌ ಸಿನೆಮಾ ಹಾಗೂ ಟಿವಿ ಕಾರ್ಯಕ್ರಮಗಳನ್ನ ಮನೆಯಲ್ಲೇ ಕೂತು ಮೊಬೈಲ್‌ನಲ್ಲಿ ಇಲ್ಲಾ, ಟಿವಿಯಲ್ಲಿ ನೋಡಬಹುದಾದ ಒಂದು ವಿಧಾನ. ಅದಕ್ಕಾಗಿ ಆಪ್‌ಗಳನ್ನ ಡೌನ್ಲೋಡ್ ಮಾಡಿಕೊಳ್ಳಬೇಕು. ಹಾಗೂ ಅದಕ್ಕೆ ಸಾವಿರಾರು ರೂಪಾಯಿ ಕೊಟ್ಟು OTT ಅಪ್ಲಿಕೇಶನ್ಗಳಿಗೆ ಚಂದಾದಾರರಾಗಬೇಕು. ಈಗ ನೀವು ಇನ್ನುಮುಂದೆ ದುಡ್ಡೇ ಖರ್ಚು ಮಾಡದೇ OTT ಆ್ಯಪ್‌ಗಳನ್ನ ಬಳಸಬಹುದು. ಸದ್ಯಕ್ಕೆ ಎಲ್ಲ ಆ್ಯಪ್‌ಗಳನ್ನ ಫ್ರೀಯಾಗಿ ಬಳಸಲು ಸಾಧ್ಯವಿಲ್ಲ. ಆದರೆ ಕೆಲವನ್ನ ದುಡ್ಡು ಖರ್ಚು ಮಾಡದೇ ಬಳಸಬಹುದು. ಅವುಗಳ ಪಟ್ಟಿ ಹೀಗಿದೆ.

MX ಪ್ಲೇಯರ್ ಸಾಕಷ್ಟು ಹೆಸರು ಮಾಡಿರುವಂತಹ ಆ್ಯಪ್‌. ಇನ್ನು ಮುಂದೆ ಆಫ್‌ಲೈನ್ ವೀಡಿಯೊ ಪ್ಲೇಯರ್ ಅನ್ನೊ ಆಪ್ಷನ್ ಕೂಡಾ ಇದರಲ್ಲಿ ಲಭ್ಯವಾಗಲಿದೆ.

ಈಗ ಇದನ್ನ ಸಬ್‌ಸ್ಕ್ರೈಬ್‌ ಮಾಡದೆಯೂ MX ಒರಿಜಿನಲ್‌ಗಳು ಮತ್ತು ಚೀಸ್‌ಕೇಕ್, ಕ್ವೀನ್ ಮತ್ತು ಪಾಂಡುಗಳಂತಹ ಕಾರ್ಯಕ್ರಮಗಳನ್ನ ನೋಡಬಹುದು.

ಇದರ ಹೊರತಾಗಿ ನೀವು ಈಗ Google Play Store ಅಥವಾ Apple App Store ನಿಂದ Tubi ಅನ್ನು ಡೌನ್‌ಲೋಡ್ ಮಾಡಬಹುದು. ಇದು ಉಚಿತ ವಿಷಯ ಸ್ಟ್ರೀಮಿಂಗ್ ಸೇವೆಯನ್ನು ಒದಗಿಸುತ್ತದೆ. ಹಾಲಿವುಡ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದ ಆ್ಯಪ್‌.

ಇನ್ನೂ ಪ್ಲೆಕ್ಸ್ ಅನ್ನೊ ಆ್ಯಪ್‌ನ್ನ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆ್ಯಪ್‌ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಹೊರತಾಗಿ, ಬಳಕೆದಾರರು ಈ ಸ್ಟ್ರೀಮಿಂಗ್ ಸೇವೆಯೊಂದಿಗೆ 200 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು. ಇದರಲ್ಲಿ ನೀವು ಹಿಂದಿಯಲ್ಲಿ ಕಾರ್ಯಕ್ರಮ ವೀಕ್ಷಿಸುವ ಆಪ್ಷನ್ ಕೂಡ ಇಡಲಾಗಿದೆ.

Voot, ಕಲರ್ಸ್ ಮತ್ತು MTV ಈ ಆ್ಯಪ್‌ಗಳಲ್ಲೂ ಸಹ ಅನೇಕ ಕಾರ್ಯಕ್ರಮ ಉಚಿತವಾಗಿ ನೋಡಲು ಅವಕಾಶವಿದೆ. ಆದರೆ ಇಲ್ಲಿ ಸಮಸ್ಯೆ ಏನಂದರೆ ಜಾಹೀರಾತುಗಳು ಆಗಾಗ ಒಂದೇ ಸಮನೆ ಬರುತ್ತಲೇ ಇರುತ್ತೆ. ಈ ಜಾಹಿರಾತುಗಳಿಂದ ಮುಕ್ತರಾಗಬೇಕೆಂದರೆ ನೀವು ದುಡ್ಡು ಕೊಟ್ಟ ಚಂದಾದಾರರಾಗಬೇಕು. ಇಲ್ಲವಾದಲ್ಲಿ ಜಾಹೀರಾತುಗಳ ಕಾಟ ತಪ್ಪಿದ್ದಲ್ಲ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...