ಚಾಲಕನ ಕುಡಿತದ ಅಮಲಿನ ಕಾರಣಕ್ಕೆ ಫೋರ್ಡ್ ಮಸ್ಟಾಂಗ್ ಕಾರು ವಿದ್ಯುತ್ ಕಂಬ ಏರಿ ನಿಂತ ಪ್ರಸಂಗ ನಡೆದಿದೆ. ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸಿಲುಕಿಕೊಂಡರೂ ಯಾರಿಗೂ ಜೀವ ಹಾನಿಯಾಗಿಲ್ಲ.
ಫ್ಲೋರಿಡಾದ ತಲಹಸ್ಸಿ ಪೊಲೀಸರು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಕಾರಿನ ಪರಿಸ್ಥಿತಿ ತೋರಿಸುತ್ತದೆ, ಅದು ಕುಡಿದ ಸ್ಥಿತಿಯಲ್ಲಿ ವ್ಯಕ್ತಿಯಿಂದ ಓಡಿಸಲ್ಪಟ್ಟಿದೆ. ಕಾರು ವಿದ್ಯುತ್ ಕಂಬದ ಮೇಲೆ ಹತ್ತಿ ಇಳಿಜಾರಿನ ಸ್ಥಿತಿಯಲ್ಲಿ ಸಿಲುಕಿಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
“ನೀವು ಕುಡಿದು ವಾಹನದಲ್ಲಿ ಪ್ರಯಾಣಿಸಬಾರದು ಎಂದು ನಾವು ಎಂದಾದರೂ ಹೇಳಿದ್ದೇವೆಯೇ? ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವಾದರೂ, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವುದು ಎಂದಿಗೂ ಸರಿಯಲ್ಲ” ಎಂದು ಶೀರ್ಷಿಕೆ ಬರೆಯಲಾಗಿದೆ.
ಕಾರಿನ ಅಪಘಾತ ಪ್ರಕರಣ ತೋರಿಸುವ ಸಿಸಿಟಿವಿ ಫೂಟೇಜ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಾಲಕನು ಕಾರಿನಲ್ಲಿ ಅಲ್ಲಿವರೆಗೆ ಚಲಾಯಿಸುವಾಗ ಹೇಗೆ ಹೊರಬಂದನು ಎಂದು ಆಶ್ಚರ್ಯಪಡಬಹುದು. ರೆಡ್ಡಿಟ್ನಲ್ಲಿ ಕಾಣಿಸಿಕೊಂಡ ಮತ್ತೊಂದು ವೀಡಿಯೊ ಅದಕ್ಕೆ ನಿಖರವಾಗಿ ಉತ್ತರಿಸುತ್ತದೆ. ವ್ಯಕ್ತಿ ಬಾಗಿಲು ತೆರೆದು ಕೆಳಗೆ ಜಿಗಿಯಲು ಪ್ರಯತ್ನ ಮಾಡುವುದನ್ನು ವಿಡಿಯೊ ತೋರಿಸುತ್ತದೆ.