ಮೊಮೊ ಖಾದ್ಯಗಳನ್ನು ಹಲವಾರು ಮಂದಿ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ನೀವು ಎಷ್ಟು ಮೊಮೊಗಳನ್ನು ತಿನ್ನಬಹುದು..? 6, 10 ಅಬ್ಬಬ್ಬಾ ಅಂದ್ರೆ 15..? ಆದರೆ, ಇಲ್ಲೊಬ್ಬಾಕೆ 100 ಮೊಮೊಗಳನ್ನು ತಿನ್ನುವ ಸವಾಲನ್ನು ತೆಗೆದುಕೊಂಡಿದ್ದಾಳೆ. ಆದ್ರೆ, ಆಕೆ ಅಷ್ಟನ್ನೂ ತಿನ್ನುವಲ್ಲಿ ಸಫಲವಾಗಿದ್ದಾಳಾ..?
100 ಮೊಮೊಗಳನ್ನು ಯಾರೂ ಕೂಡ ಒಮ್ಮೆಲೆ ತಿನ್ನಲು ಸಾಧ್ಯವಿಲ್ಲ ಎಂದು ಹೇಳಬಹುದು. ಆದರೆ, ಯೂಟ್ಯೂಬರ್ ಮಾಧುರಿ ಲಾಹಿರಿ 100 ಮೊಮೊಗಳನ್ನು ಮೇಜಿನ ಮೇಲಿರಿಸಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, 7 ಮಿಲಿಯನ್ ಗಿಂತ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕಳೆದ ವರ್ಷ ಅಪ್ಲೋಡ್ ಮಾಡಲಾಗಿದ್ದ ವಿಡಿಯೋ ಇದಾಗಿದ್ದು, ಮತ್ತೆ ವೈರಲ್ ಆಗಿದೆ.
ಯೂಟ್ಯೂಬ್ ವಿಡಿಯೋದಲ್ಲಿ 100 ಮೊಮೊಗಳನ್ನು ತಿನ್ನುವ ಬಗ್ಗೆ ಮಾಧುರಿ ಲಾಹಿರಿ ನೇರವಾಗಿ ಪ್ರಸ್ತಾಪಿಸಿದ್ದಾರೆ. ಮೇಜಿನ ಮೇಲೆ 100 ಮೊಮೊಗಳು ಹಾಗೂ ಚಟ್ನಿಯನ್ನು ಇರಿಸಲಾಗಿದ್ದು, ಒಂದೊಂದೇ ತಿನ್ನುತ್ತಾ ಕೂತಿದ್ದಾಳೆ.
ಆರಂಭದಲ್ಲಿ ಬಹಳ ಸುಲಭವಾಗಿ ವೇಗವಾಗಿ ತಿನ್ನುತ್ತಿದ್ದ ಆಕೆ, ಬರುಬರುತ್ತಾ ಹೊಟ್ಟೆ ತುಂಬುತ್ತಿದ್ದಂತೆ ಅವಳಿಗೆ ತಿನ್ನಲು ಸಾಧ್ಯವಾಗಿಲ್ಲ. ಆದರೂ ತುಂಬಾ ಕಷ್ಟಪಟ್ಟಿದ್ದಾಳೆ. ತಿಂದಳಾ ಇಲ್ಲವಾ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.
ಸದ್ಯ, ಈ ಹಳೆ ವಿಡಿಯೋ ಮತ್ತೆ ವೈರಲ್ ಆಗಿದ್ದು, ಇಷ್ಟೊಂದು ಜಂಕ್ ಫುಡ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.