ಇತ್ತೀಚಿನ ದಿನಗಳಲ್ಲಿ ಸ್ಟ್ರೀಟ್ ಆರ್ಟ್ ಹೆಚ್ಚು ಜನಪ್ರಿಯವಾಗಿದೆ. ನಿಮ್ಮ ನಗರದ ರಸ್ತೆಗಳಲ್ಲಿ ಬೃಹತ್ ಗೋಡೆಗಳು ಅಥವಾ 3D ಕಲೆಯ ಮೇಲೆ ಮಾಡಿದ ಕೆಲವು ಭವ್ಯವಾದ ವರ್ಣಚಿತ್ರಗಳನ್ನು ನೀವು ನೋಡಿರಬೇಕು. ಇದೀಗ ಅಂಥದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೈಜತೆಯಂತೆ ತೋರುವ ಬೀದಿ ಬದಿಯ ಈ ತ್ರಿಡಿ ಕಲೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಸೀಮೆಸುಣ್ಣವನ್ನು ಬಳಸಿ ರಸ್ತೆಯ ಮೇಲೆ ಬಿಡಿಸಿರುವ ತ್ರಿಡಿ ಚಿತ್ರಕಲೆ ನೆಟ್ಟಿಗರನ್ನು ಆನಂದದಲ್ಲಿ ತೇಲಿಸುತ್ತದೆ. ಅಪೂರ್ಣವಾಗಿರುವ ಸೇತುವೆ ಮೇಲೆ ಇದನ್ನು ಬಿಡಿಸಲಾಗಿದೆ. ಈ ಚಿತ್ರಕಲೆಯನ್ನು ಇನ್ನಷ್ಟು ನೈಜವಾಗಿ ಕಾಣುವಂತೆ ಸೇತುವೆಯ ಕೆಳಗಿರುವ ಕಾಲುವೆಗೂ ಬಣ್ಣ ಹಚ್ಚುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಸೇತುವೆಯ ಮೇಲೆಯೇ ಸೇತುವೆ ಕೊನೆಗೊಂಡಂತೆ ತ್ರಿಡಿ ಕಲೆಯಲ್ಲಿ ಚಿತ್ರ ಬಳಸಲಾಗಿದೆ. ಆತ ಪೇಂಟಿಂಗ್ ಮುಗಿಸುತ್ತಿದ್ದಂತೆಯೇ ಕುರಿಗಳ ಹಿಂಡು ಪೇಂಟಿಂಗ್ ಅನ್ನು ಸಮೀಪಿಸುತ್ತಿದೆ. ಆದರೆ ಇದು ಪೇಂಟಿಂಗ್ ಎನ್ನುವುದನ್ನು ತಿಳಿಯದ ಕುರಿಮಂದೆ ಸೇತುವೆ ಅಲ್ಲಿಯೇ ಅಂತ್ಯಗೊಂಡಿತು ಎಂದು ತಿಳಿದು ಮಾರ್ಗ ಬದಲಾಯಿಸುತ್ತದೆ. ಚಿತ್ರಕಲೆ ಎಷ್ಟು ನೈಜವಾಗಿ ಕಾಣುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.