alex Certify ಹಾವು-ಹಕ್ಕಿಗಳ ಕಾದಾಟ: ಗೆದ್ದದ್ದು ಯಾರು….? ಕುತೂಹಲದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವು-ಹಕ್ಕಿಗಳ ಕಾದಾಟ: ಗೆದ್ದದ್ದು ಯಾರು….? ಕುತೂಹಲದ ವಿಡಿಯೋ ವೈರಲ್​

ಹಾವು ಮತ್ತು ಪಕ್ಷಿಗಳ ನಡುವಿನ ಮುಖಾಮುಖಿಯಲ್ಲಿ, ಯಾರು ಗೆಲ್ಲುತ್ತಾರೆ ಎಂದು ನೀವು ಭಾವಿಸುತ್ತೀರಿ? ನೀವು ಇದಕ್ಕೆ ಉತ್ತರಿಸುವ ಮೊದಲು, ಈ ವಿಡಿಯೋ ನೋಡಿ. ಪರಿಪೂರ್ಣ ಯೋಜನೆ ಮತ್ತು ತಂತ್ರವಿದ್ದರೆ ಬಲಿಷ್ಠರೂ ಸೋಲಬಹುದು ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
ಹಾವಿನ ಮೇಲೆ ಹಕ್ಕಿಗಳ ಹಿಂಡು ದಾಳಿ ಮಾಡುವ ಹಳೆಯ ವೀಡಿಯೊ ಇದಾಗಿದ್ದು, ಪುನಃ ವೈರಲ್​ ಆಗಿದೆ.

ದಕ್ಷಿಣ ಆಫ್ರಿಕಾದ ಗೌಟೆಂಗ್‌ನ ಡಿನೋಕೆಂಗ್ ಗೇಮ್ ರಿಸರ್ವ್‌ನಲ್ಲಿ ಈ ಘಟನೆ ನಡಡೆದಿದೆ.
ಪಕ್ಷಿಗಳು ಹಾವಿನ ವಿರುದ್ಧ ಹೋರಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ಕ್ಷಣವನ್ನು ಪರಿಸರ ಸಲಹೆಗಾರ ಕೀತ್ ರೈನ್ ಮತ್ತು ಅವರ ಪತ್ನಿ ಟ್ರೇಸಿ ಕ್ಯಾಂಪಿಂಗ್ ಟ್ರೀ ಮೇಲೆ ಸೆರೆಹಿಡಿದಿದ್ದಾರೆ. ಈ ವಿಡಿಯೋದಲ್ಲಿ ಇರುವ ಹಕ್ಕಿಗಳನ್ನು ಬಾಬ್ಲರ್‌ಗಳು ಮತ್ತು ಗ್ಲೋಸಿ ಸ್ಟಾರ್ಲಿಂಗ್ ಎಂದು ಗುರುತಿಸಲಾಗಿದೆ.

ಹೋರಾಟದ ಅಂತ್ಯದ ವೇಳೆಗೆ ಹಾವು ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡು ಓಡಿ ಹೋಗುವುದನ್ನು ನೋಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...