ಇದು ಎಂತವರಿಗೂ ಗಾಬರಿ ತರುವ ಸುದ್ದಿಯಾಗಿದೆ. ಟರ್ಕಿಯ ಏರ್ಲೈನ್ನ ವಿಮಾನದ ಅಟೆಂಡೆಂಟ್ಗೆ ಊಟದ ತಟ್ಟೆಯಲ್ಲಿ ಹಾವಿನ ತಲೆ ಕಾಣಿಸಿದೆ.
ಕ್ಯಾಬಿನ್ ಸಿಬ್ಬಂದಿ ಜುಲೈ 21 ರಂದು ಟರ್ಕಿಯ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್ಗೆ ಸನ್ಎಕ್ಸ್ಪ್ರೆಸ್ ವಿಮಾನದೊಂದಿಗೆ ಪ್ರಯಾಣಿಸುತ್ತಿದ್ದಾಗ ಆಹಾರದಲ್ಲಿ ಹಾವಿನ ತಲೆಯನ್ನು ಕಂಡುಕೊಂಡರು. ತರಕಾರಿಗಳು ಮತ್ತು ಆಲೂಗಡ್ಡೆ ಮತ್ತಿತರ ತಿನಿಸಿನ ನಡುವೆ ಹಾವಿನ ತಲೆ ಕಂಡುಬಂದಿದೆ ಎಂದು ಕ್ಯಾಬಿನ್ ಸಿಬ್ಬಂದಿ ಹೇಳಿದ್ದಾರೆ.
ಸನ್ಎಕ್ಸ್ಪ್ರೆಸ್ ಏರ್ಲೈನ್ಸ್ಗೆ ಕ್ಯಾಟರಿಂಗ್ ಸೇವೆಯನ್ನು ಸ್ಯಾನ್ಕಾಕ್ ಇನ್ ಫ್ಲೈಟ್ ಒದಗಿಸಿತ್ತು. ಕ್ಯಾಬಿನ್ ಸಿಬ್ಬಂದಿ ಆಹಾರ ತಿನ್ನುತ್ತಿದ್ದಾಗ ಹಾವಿನ ತಲೆ ಬಿದ್ದಿರುವುದು ಕಂಡು ಬಂದಿದ್ದು, ಹಾವಿನ ತಲೆ ಕಾಣಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.
ಭೀಮನ ಅಮವಾಸ್ಯೆಯಂದು ಪತಿಯ ಆಯಸ್ಸು, ಯಶಸ್ಸಿಗೆ ಪತ್ನಿ ತಪ್ಪದೆ ಮಾಡಿ ಈ ಕೆಲಸ
ಘಟನೆ ಬೆಳಕಿಗೆ ಬಂದ ಕೂಡಲೇ, ಸನ್ ಎಕ್ಸ್ಪ್ರೆಸ್ ಏರ್ಲೈನ್ಸ್ ಹೇಳಿಕೆಯನ್ನು ಬಿಡುಗಡೆ ಮಾಡಿ, ಈ ವಿಷಯವನ್ನು ಪರಿಶೀಲಿಸಲು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಘೋಷಿಸಿ, ಅತ್ಯುನ್ನತ ಗುಣಮಟ್ಟದ ಸೇವೆ ಒದಗಿಸುವುದು ಪ್ರಮುಖ ಆದ್ಯತೆ ಎಂದು ಹೇಳಿಕೊಂಡಿದೆ.
ಆಹಾರವನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಲಾಗುತ್ತದೆ, ಆಹಾರದಲ್ಲಿ ತಾಜಾ ಹಾವಿನ ತಲೆ ಬರಲು ಹೇಗೆ ಸಾಧ್ಯವಿದೆ, ಈ ರೀತಿ ಟೀಕೆಯಲ್ಲಿ ಅರ್ಥವಿಲ್ಲ ಎಂದು ಆಹಾರ ಸರಬರಾಜು ಕಂಪನಿ ಹೇಳಿಕೊಂಡಿದೆ.
ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ ಎಂಬ ಆರೋಪವೂ ಇದೆ. ಆಹಾರದಲ್ಲಿ ಬಸವನಹುಳು ಮತ್ತು ಜೀರುಂಡೆಗಳು ಕಂಡುಬಂದಿವೆ ಎಂದು ವಿಮಾನಯಾನ ಸಿಬ್ಬಂದಿ ಈ ಹಿಂದೆ ದೂರು ನೀಡಿದ್ದರು.