ಜ್ವಾಲಾಮುಖಿ ಸ್ಫೋಟಗೊಳ್ಳುವ ಸುಮಾರು ಒಂದು ತಿಂಗಳ ಮೊದಲು, ವನ್ಯಜೀವಿ ವಿಜ್ಞಾನಿಗಳು ಮೌನಾ ಲೊವಾದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ಪಕ್ಷಿಯನ್ನು ಮೊದಲ ಬಾರಿಗೆ ಕಂಡುಹಿಡಿದರು. ಇದನ್ನು ‘ಅಕೆ ಅಕೆ’ ಎಂಬ ಪಕ್ಷಿ ಎಂದು ಗುರುತಿಸಲಾಗಿದೆ. ಇದು ಹವಾಯಿ ಜ್ವಾಲಾಮುಖಿ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಪಕ್ಷಿ ತಜ್ಞ ಹ್ಯಾಂಡ್ಲರ್ ಡಾ. ಮಿಚೆಲ್ ರೆನಾಲ್ಡ್ಸ್ ಅವರ ಮಾರ್ಗದರ್ಶನದಲ್ಲಿ ಸ್ಲೇಟರ್ ಆಫ್ ಹವಾಯಿ ಡಿಟೆಕ್ಟರ್ ಡಾಗ್ಸ್ ಎಂಬ ಯುವಕ ಇದರ ಬಿಲವನ್ನು ಕಂಡುಹಿಡಿದಿದ್ದಾನೆ. “ಇದು ಹವಾಯಿ ಜ್ವಾಲಾಮುಖಿಗಳ ರಾಷ್ಟ್ರೀಯ ಉದ್ಯಾನವನದಲ್ಲಿ ಗುರುತಿಸಲಾದ ಮೊದಲ ದೃಢೀಕೃತ ಅಕೆ ಅಕೆ ಗೂಡು” ಎಂದು ಜೀವಶಾಸ್ತ್ರಜ್ಞ ಚಾರ್ಲೊಟ್ ಫೋರ್ಬ್ಸ್ ಪೆರ್ರಿ ಹೇಳಿದ್ದಾರೆ.
ಉದ್ಯಾನದಲ್ಲಿರುವ ಜೀವಶಾಸ್ತ್ರಜ್ಞರು 1990 ರ ದಶಕದಿಂದಲೂ ಮೌನಾ ಲೊವಾದಲ್ಲಿ ‘ಅಕೆ ಅಕೆ’ ಇರುವಿಕೆಯನ್ನು ತಿಳಿದಿದ್ದಾರೆ. ನಾವು ಹವಾಯಿ ಡಿಟೆಕ್ಟರ್ ಡಾಗ್ಸ್‌ನೊಂದಿಗೆ ಕೆಲಸ ಮಾಡಿದ್ದೇವೆ ಮತ್ತು ಎರಡು ದಿನಗಳಲ್ಲಿ, ‘ಅಕೆ ಅಕೆ’ ಗೂಡು ಪತ್ತೆ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಹವಾಯಿಯಲ್ಲಿ ಸುಮಾರು 240 ಜೋಡಿಗಳು ಮಾತ್ರ ಇದ್ದು, ಇವುಗಳ ಸಂತತಿ ವೃದ್ಧಿಸುವತ್ತ ಗಮನ ಹರಿಸಲಾಗುತ್ತಿದೆ ಎಂದಿದ್ದಾರೆ. ಈ ಹಕ್ಕಿಯ ಕುರಿತು ಹೆಚ್ಚಿನ ಸಂಶೋಧನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.