
ಅವಶೇಷಗಳಡಿ ಸಿಲುಕಿ ಕನಿಷ್ಟ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ ಭಯಾನಕತೆಯ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೆಕ್ಸಿಕೋದ ಪೆಸಿಫಿಕ್ ರೆಸಾರ್ಟ್ ನಗರದ ಅಕಾಪುಲ್ಕೋ ಎಂಬಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯು 7.1 ದಾಖಲಾಗಿದೆ. ಭೂಕಂಪದ ತೀವ್ರತೆಗೆ ಮರಗಳು ಹಾಗೂ ದೊಡ್ಡ ಬಂಡೆಗಳು ರಸ್ತೆ ಮೇಲೆ ಉರುಳಿದೆ.
ಭೂಕಂಪದ ಸಮಯದಲ್ಲಿ ಆಕಾಶದಲ್ಲಿ ವಿಚಿತ್ರವಾದ ಮಿಂಚು ಕಾಣಿಸಿದ್ದು ಇದು 2017ರಲ್ಲಿ ಸಂಭವಿಸಿದ ಭೂಕಂಪದ ಕ್ಷಣಗಳನ್ನು ನೆನಪಿಸಿದೆ. ಇದೇ ರೀತಿ ಆಗ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳು ವೈರಲ್ ಆಗಿದ್ದವು. ಈ ವಿಡಿಯೋಗಳು ಕಂಡು ಅನೇಕರು ದಿಗ್ಬ್ರಮೆಗೆ ಒಳಗಾಗಿದ್ದರೆ. ಇನ್ನೂ ಹಲವರು ಇದು ಭೂಕಂಪದ ಸಮಯದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ.