
ಇಲ್ಲೊಬ್ಬಳು ಪ್ರೀ ವೆಡ್ಡಿಂಗ್ ಫೋಟೋಶೂಟ್ ಗೆ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದಾಳೆ. ಸೀರೆಯುಟ್ಟು ವಧುವಿನಂತೆ ಅಲಂಕಾರಗೊಂಡಿರುವ ಈಕೆ ಜಿಮ್ ನಲ್ಲಿ ಕಸರತ್ತು ಮಾಡಿದ್ದಾಳೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, ವಧು ವೇಟ್‌ಲಿಫ್ಟಿಂಗ್ ಮತ್ತು ಡಂಬ್ಬೆಲ್ಸ್ ಎತ್ತುವುದನ್ನು ನೋಡಬಹುದು. ಈಕೆ ವ್ಯಾಯಾಮ ಮಾಡುತ್ತಿದ್ದರೆ ಫೋಟೋಗ್ರಾಫರ್ ಭಿನ್ನ ಭಂಗಿಗಳಲ್ಲಿ ಫೋಟೋಶೂಟ್ ಮಾಡಿದ್ದಾನೆ. ಅತ್ಯಂತ ಕ್ಲಿಷ್ಟಕರವಾದ ಕಸರತ್ತುಗಳನ್ನೆಲ್ಲ ಆಕೆ ಸರಾಗವಾಗಿ ಮಾಡುತ್ತಿರುವುದು ಶ್ಲಾಘನೀಯ.
ಕೇವಲ 27 ಸೆಕೆಂಡುಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಕಾರಾತ್ಮಕವಾಗಿ, ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಮದುವೆ ಅನ್ನೋದು ಒಂದು ಯುದ್ಧವಾಗಿದ್ದು, ಅದಕ್ಕೆ ಈ ರೀತಿಯ ಸಿದ್ಧತೆ ಅಗತ್ಯ ಅಂತೆಲ್ಲಾ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.