alex Certify ರೋಹಿತ್​ ಶರ್ಮಾ ಪಾದ ಸ್ಪರ್ಶಿಸಲು ಮೈದಾನಕ್ಕೆ ಓಡಿ ಬಂದ ಅಭಿಮಾನಿ..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಹಿತ್​ ಶರ್ಮಾ ಪಾದ ಸ್ಪರ್ಶಿಸಲು ಮೈದಾನಕ್ಕೆ ಓಡಿ ಬಂದ ಅಭಿಮಾನಿ..! ವಿಡಿಯೋ ವೈರಲ್​

ಭಾರತ ಹಾಗೂ ನ್ಯೂಜಿಲೆಂಡ್​​ ನಡುವೆ ರಾಂಚಿಯಲ್ಲಿ ನಡೆದ ಎರಡನೇ ಟಿ 20 ಪಂದ್ಯದ ವೇಳೆ ಭದ್ರತೆಯನ್ನು ಉಲ್ಲಂಘಿಸಿದ ರೋಹಿತ್​ ಶರ್ಮಾ ಅಭಿಮಾನಿ ಸೀದಾ ಮೈದಾನದಲ್ಲಿ ಓಡಿ ಬಂದು ರೋಹಿತ್​ ಶರ್ಮಾ ಪಾದವನ್ನು ಸ್ಪರ್ಶಿಸಲು ಯತ್ನಿಸಿದ್ದಾರೆ. ಅಭಿಮಾನಿಯು ರೋಹಿತ್​ ಶರ್ಮಾ ಎದುರು ಸಾಷ್ಟಾಂಗ ನಮಸ್ಕಾರ ಮಾಡಿದರೂ ರೋಹಿತ್​ ಪಾದಗಳನ್ನು ಸ್ಪರ್ಶಿಸಲು ಸಾಧ್ಯವಾಗಲಿಲ್ಲ.

ರೋಹಿತ್​​ ಶರ್ಮಾ ತಮ್ಮ ಕಾಲುಗಳನ್ನು ಸ್ಪರ್ಶಿಸದಂತೆ ಅಭಿಮಾನಿಗೆ ಮನವರಿಕೆ ಮಾಡುತ್ತಿದ್ದರು. ಇದೇ ವೇಳೆ ಭದ್ರತಾ ಸಿಬ್ಬಂದಿ ಕೂಡ ಅಭಿಮಾನಿಯ ಬಳಿಗೆ ಧಾವಿಸಿದ್ದು ಅಭಿಮಾನಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸ್ಟೇಡಿಯಂನಿಂದ ಪ್ರೇಕ್ಷಕರು ಈ ದೃಶ್ಯವನ್ನು ಚಿತ್ರೀಕರಿಸಿದ್ದು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ.

SHOCKING: ಹೆರಿಗೆ ವೇಳೆ ಸೋಂಕು ತಗುಲಿದ್ರೆ ಭಾರಿ ಅಪಾಯ, ಸಾಮಾನ್ಯರಿಗಿಂತ ಎರಡುಪಟ್ಟು ರಿಸ್ಕ್

ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾಗೆ ಈ ರೀತಿಯ ಅನುಭವ ಆಗಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅಭಿಮಾನಿಗಳು ರೋಹಿತ್​ ಶರ್ಮಾಗೆ ಹಸ್ತಲಾಘವ ಮಾಡಲು ಕಾಲನ್ನು ಸ್ಪರ್ಶಿಸುವ ಸಲುವಾಗಿ ಭದ್ರತೆ ಉಲ್ಲಂಘಿಸಿದ್ದಾರೆ.

— Sunchika Pandey/संचिका पाण्डेय (@PoliceWaliPblic) November 19, 2021

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...