ಶಾಲಾ ದಿನಗಳಲ್ಲಿ ಅಯ್ಯೋ ದಿನಾ ಶಾಲೆಗೆ ಹೋಗಬೇಕಾ ಅಂದುಕೊಂಡು ಏನೋ ಒಂದೊಂದು ನೆಪ ಹೇಳಿ ರಜಾ ಹಾಕಿರುತ್ತೀರಿ ಅಲ್ವಾ..? ಸುಳ್ಳು ಹೇಳುವುದು ಅಷ್ಟು ಸುಲಭವಲ್ಲ. ಆದರೂ ಏನಾದರೊಂದು ಅನಾರೋಗ್ಯದ ನೆಪವೊಡ್ಡಿ ಹಲವು ಮಂದಿ ಶಾಲೆಗೆ ಗೈರಾಗುತ್ತಾರೆ. ಹಾಗೆಯೇ ಇಲ್ಲೊಬ್ಬಳು ಬಾಲಕಿ ಸುಳ್ಳು ಹೇಳಿದ್ದು ವರವಾಗಿ ಪರಿಣಮಿಸಿದೆ.
ಹೌದು, ಬಾಲಕಿಯೊಬ್ಬಳಿಗೆ ಶಾಲೆಗೆ ಹೊರಡಲು ಉದಾಸೀನವಾಯಿತಂತೆ. ಹೇಗಾದರೂ ಮಾಡಿ ಗೈರಾಗಬೇಕೆಂದು ಅಂದುಕೊಂಡ ಬಾಲಕಿ ಗಂಟಲು ನೋವು ಎಂದು ಹೇಳಿ ರಜಾ ಪಡೆದಿದ್ದಾಳೆ. ಆದರೆ, ಅದುವೇ ಈಕೆಯ ಪ್ರಾಣ ಕಾಪಾಡಿದೆ.
ಈ ಬಗ್ಗೆ ಟಿಕ್ ಟಾಕ್ ನಲ್ಲಿ ಮಾಹಿತಿ ಹಂಚಿಕೊಂಡ ಮೇರಿ, ತಾನು 8 ವರ್ಷ ವಯಸ್ಸಿನವಳಾಗಿದ್ದಾಗ ಗಂಟಲು ನೋವೆಂದು ಹೇಳಿ ಶಾಲೆ ತಪ್ಪಿಸಿಕೊಂಡಿದ್ದಾಗಿ ಹೇಳಿದ್ದಾರೆ. ಬಾಲಕಿ ಸುಳ್ಳು ಹೇಳುತ್ತಿದ್ದಾಳೆ ಎಂಬುದು ಗೊತ್ತಾಗದೆ, ಈಕೆಯ ತಾಯಿ ಮೇರಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದಾರಿಮಧ್ಯೆ ನಿಜವಾಗಲೂ ಈಕೆಗೆ ಗಂಟಲು ನೋಯಲು ಶುರುವಾಗಿದೆ. ಕ್ಲಿನಿಕ್ ತಲುಪುವಷ್ಟರಲ್ಲಿ ಮೇರಿ ಬಸವಳಿದಿದ್ದಳು.
ಮೇರಿ ಕ್ಲಿನಿಕ್ ತಲುಪಿದ ನಂತರ ಆಕೆಯ ತೂಕ ಅತ್ಯಂತ ಇಳಿಕೆಯಾಗಿದೆ ಎಂದು ಡಾಕ್ಟರ್ ತಿಳಿಸಿದ್ದಾರೆ. ಹೀಗಾಗಿ ಕೆಲವು ಪರೀಕ್ಷೆಗಳನ್ನು ಮಾಡಿದ್ದಾರೆ. ಅಂತಿಮ ವರದಿ ಬಂದಾಗ, 8 ವರ್ಷದ ಬಾಲಕಿಗೆ ಮಧುಮೇಹ ಇರುವುದು ಪತ್ತೆಯಾಗಿದೆ. ರಕ್ತದ ಸಕ್ಕರೆ ಮಟ್ಟವು ಅತ್ಯಂತ ಅಪಾಯಕಾರಿ ಮಟ್ಟದಲ್ಲಿತ್ತು ಎಂದು ಮೇರಿ ಟಿಕ್ ಟಾಕ್ ನಲ್ಲಿ ಹೇಳಿಕೊಂಡಿದ್ದಾಳೆ. ಬಳಿಕ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಹಲವು ವಾರಗಳವರೆಗೆ ಶಾಲೆಗೆ ಗೈರಾಗಿದ್ದಾಗಿ ವಿವರಿಸಿದ್ದಾಳೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, 5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
https://www.youtube.com/watch?time_continue=23&v=9kbjAquLfJo&feature=emb_logo