ಆನೆಯೊಂದು ಕಟ್ಟಡದಿಂದ ಜಾಗರೂಕತೆಯಿಂದ ತಗ್ಗಿ ಬಗ್ಗಿ ಹೊರಬರುವ ವಿಡಿಯೋ ಸಾಮಾಜಿಕ ಜಾಲತಾಣದ ಕೇಂದ್ರಬಿಂದುವಾಗಿದೆ.
ಈ ವಿಡಿಯೋ ಕ್ಲಿಪ್ ಅನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತಾ ನಂದಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ, ದೊಡ್ಡ ಗಾತ್ರದ ಆನೆ ತಾಳ್ಮೆಯಿಂದ ಕೊಠಡಿಯಿಂದ ಎಚ್ಚರಿಕೆಯಿಂದ ಹೊರಕ್ಕೆ ಬರುತ್ತದೆ. ನಿಧಾನವಾಗಿ ಬೆನ್ನನ್ನು ಬಾಗಿಸಿ, ಒಂದು ಕಾಲು ಮುಂದಕ್ಕೆ ಇರಿಸಿ ಯಶಸ್ವಿಯಾಗಿ ಹೊರಬರುವುದನ್ನು ಕಾಣಬಹುದು.
ಸುಸಾಂತ ನಂದಾ ಪ್ರಕಾರ, ಆನೆ ತನ್ನ ನೆಚ್ಚಿನ ಆಹಾರವನ್ನು ತಿಂದು ಕಟ್ಟಡದಿಂದ ಹೊರಬರುತ್ತಿತ್ತು. ಕ್ಲಿಪ್ನಲ್ಲಿ ಸ್ಥಳ ಮತ್ತು ಸಮಯ ನಮೂದಿಸಿಲ್ಲ.
ಆನೆಗಳು, ನಾಯಿಗಳು ಸೇರಿದಂತೆ ಒಂದಷ್ಟು ಪ್ರಾಣಿಗಳು ಉತ್ತಮವಾದ ವಾಸನೆ ಗ್ರಹಿಸುತ್ತವೆ. ಹಲವಾರು ಮೈಲುಗಳಷ್ಟು ದೂರದಲ್ಲಿರುವ ಆಹಾರವನ್ನು ವಾಸನೆ ಗ್ರಹಿಸುತ್ತವೆ.
ಮೈಕ್ರೋ-ಬ್ಲಾಗಿಂಗ್ ಬಳಕೆದಾರರು ಈ ವೀಡಿಯೊಗೆ ಪ್ರತಿಕ್ರಿಯಿಸಲು ಆಸಕ್ತಿ ತೋರಿಸಿದ್ದು, ಆನೆಯ ನೆಚ್ಚಿನ ತಿಂಡಿ ಯಾವುದು ಎಂದು ತಿಳಿಯಲು ನಿಜವಾಗಿಯೂ ಉತ್ಸುಕನಾಗಿದ್ದೆ ಎಂದು ಒಬ್ಬರು ಬರೆದಿದ್ದಾರೆ.