
ಮೃಗಾಲಯದಲ್ಲಿ ಆನೆಯೊಂದು ತನ್ನ ಆವರಣದಲ್ಲಿ ಬಿದ್ದ ಮಗುವಿನ ಪಾದರಕ್ಷೆಯನ್ನು ಹಿಂತಿರುಗಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.
ಈ ಘಟನೆ ಚೀನಾದ ಶಾಂಡಾಂಗ್ ಪ್ರಾಂತ್ಯದಲ್ಲಿ ನಡೆದಿದ್ದು, ಈ ರೋಚಕ ಮತ್ತು ಮನಸ್ಸಿಗೆ ಮುದ ನೀಡುವ ಕ್ಲಿಪ್ ಅನ್ನು ಮೊದಲು ನೌ ದಿಸ್ ನ್ಯೂಸ್, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಕಡಿಮೆ ಅವಧಿಯಲ್ಲಿ 1 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಮೃಗಾಲಯಕ್ಕೆ ಭೇಟಿ ನೀಡಿದ್ದ ಪುಟ್ಟ ಮಗುವಿನ ಶೂ ಆನೆಯ ಆವರಣಕ್ಕೆ ಬಿದ್ದು ಹೋಗಿರುತ್ತದೆ, ಅಲ್ಲಿದ್ದವರೆಲ್ಲ ಶೂ ಬಗ್ಗೆ ಮಾತನಾಡುತ್ತಿದ್ದಾಗ, ಆನೆಯು ತನ್ನ ಸೊಂಡಿಲಿನಿಂದ ಶೂ ಎತ್ತಿ ಅಲ್ಲಿದ್ದವರಿಗೆ ಕೊಡುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣ ಬಳಕೆದಾರರ ಒಂದು ಗುಂಪು, ಆನೆ ಶೂ ಅನ್ನು ಹೇಗೆ ಹಿಂದಿರುಗಿಸಿತು ಎಂಬುದನ್ನು ನೋಡಿ ದಿಗ್ಭ್ರಮೆಗೊಂಡಿದೆ ಇನ್ನು ಕೆಲವರು ಆನೆಯನ್ನು ಮೃಗಾಲಯದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.