ಮೈಸೂರು: ಕಾಡಾನೆಗಳು ಅರಣ್ಯದಿಂದ ನಾಡಿಗೆ ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಹೀಗಾಗಿ ಆನೆಗಳು ನಾಡಿನತ್ತ ಬರದಂತೆ ತಡೆಯಲ ಅರಣ್ಯಾಧಿಕಾರಿಗಳು ಕಬ್ಬಿಣದ ಬೇಲಿಗಳನ್ನು ನಿರ್ಮಿಸಿದ್ದಾರೆ. ಯಾರು ಹೇಳಿದ್ದು, ಆನೆಗೆ ಈ ಬೇಲಿಯನ್ನು ದಾಟೋಕೆ ಆಗುವುದಿಲ್ಲಾ ಅಂತಾ..? ಆನೆ ನಡೆದಿದ್ದೇ ದಾರಿ ಅನ್ನೋ ಹಾಗೆ, ಅವು ಇದನ್ನು ಕೂಡ ದಾಟಿ ಬರುತ್ತದೆ. ಸದ್ಯ ಇಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಮೈಸೂರು ಸಮೀಪದ ನಾಗರಹೊಳೆಯಲ್ಲಿ ಈ ಘಟನೆ ನಡೆದಿದೆ. ಆನೆಯು ಕಬ್ಬಿಣದ ಬೇಲಿಯ ಮೇಲೆ ಹತ್ತಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಮೊದಲಿಗೆ ಆನೆಯು ತನ್ನ ಮುಂದಿನ ಎರಡು ಕೈಗಳಿಂದ ಮೇಲೆ ಹತ್ತಿ ಬೇಲಿಯ ಆಚೆ ಇಟ್ಟಿದೆ. ನಂತರ ಸ್ವಲ್ಪ ತ್ರಾಸ ಪಟ್ಟುಕೊಂಡು ಮತ್ತೆರಡು ಕಾಲುಗಳನ್ನು ಕೂಡ ಇಟ್ಟು, ಸರಾಗವಾಗಿ ಆನೆ ಬೇಲಿ ದಾಟಿ ನಡೆದುಕೊಂಡು ಹೋಗಿದೆ.
ನಿಶ್ಚಿತ ವರನಿಂದಲೇ ಮಾಡೆಲ್ ಮೇಲೆ ಅತ್ಯಾಚಾರ
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 27 ಸೆಕೆಂಡುಗಳ ಈ ವಿಡಿಯೋವನ್ನು 1.86 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ವೀರನಹೊಸಳ್ಳಿ ವ್ಯಾಪ್ತಿಯಲ್ಲಿ ಈ ದೃಶ್ಯ ಚಿತ್ರೀಕರಿಸಲಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ. ನವೆಂಬರ್ 16 ರಂದು ಬೆಳಿಗ್ಗೆ ಆನೆಯು ಬೆಳೆಗಳ ಮೇಲೆ ದಾಳಿ ನಡೆಸಿದ ನಂತರ ಅರಣ್ಯಕ್ಕೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಆನೆ ಬೇಲಿಯನ್ನು ಸುಲಭವಾಗಿ ದಾಟಿದುದನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಕೆಲವು ಟ್ವಿಟ್ಟರ್ ಬಳಕೆದಾರರು ಈ ಹಿಂದೆಯೂ ಇಂತಹ ವಿಡಿಯೋಗಳನ್ನು ನೋಡಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.
https://twitter.com/supriyasahuias/status/1460915376376586244?ref_src=twsrc%5Etfw%7Ctwcamp%5Etweetembed%7Ctwterm%5E1460915376376586244%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Felephant-climbs-over-iron-fence-in-viral-video-twitter-amazed-2615506