ಸಾಮಾನ್ಯವಾಗಿ ಜನ ಫ್ರೀ ಟೈಂನಲ್ಲಿ ತಮ್ಮಿಷ್ಟದ ಹಾಡನ್ನ ಗುನುಗುತಿರ್ತಾರೆ. ಸಂಗೀತ ಕಲಿಯದೇ ಇದ್ರೂ ತಮ್ಮದೇ ಆದ ಶೈಲಿಯಲ್ಲಿ ಹಾಡನ್ನ ಗುನುಗುತಿರ್ತಾರೆ.
ಇದು ಕೆಲವರಿಗೆ ಇಷ್ಟ ಆಗಬಹುದು. ಕೆಲವರಿಗೆ ಕಿರಿಕಿರಿ ಆಗಬಹುದು. ಆದರೆ ವಯಸ್ಸಾದ ವ್ಯಕ್ತಿಯೊಬ್ಬರು ತಾನು ಗುನುಗುತ್ತಿರುವ ಹಾಡಿನಿಂದ ಅಂತರ್ಜಾಲದಲ್ಲಿ ಹಲವು ಹೃದಯಗಳನ್ನು ಗೆದ್ದಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಹಿರಿಯ ನಾಗರಿಕರು ʼಮಾರ್ಜಾವನ್ʼ ಚಲನಚಿತ್ರದ ಜುಬಿನ್ ನೌಟಿಯಾಲ್ ಅವರ ʼತುಮ್ ಹಿ ಆನಾʼವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ರೈಲಿನಲ್ಲಿ ಕುಳಿತು ಪ್ರಯಾಣಿಸುತ್ತಿರುವ ವೃದ್ಧರು ಹಾಡಿನಲ್ಲಿ ಮುಳುಗಿಹೋಗಿದ್ದಾರೆ.
ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿರೋ ವಿಡಿಯೋದಲ್ಲಿ ರೈಲು ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತಿರುವ ಹಿರಿಯರು ಹಿನ್ನಲೆಯಲ್ಲಿ ಹಾಡು ಪ್ಲೇ ಆಗುತ್ತಿದ್ದಂತೆ, ಗುನುಗುತ್ತಾ ಹಾಡಿನಲ್ಲಿ ಮುಳುಗಿಹೋಗುತ್ತಾರೆ. ಇಳಿವಯಸ್ಸಲ್ಲೂ ಸಂಗೀತವನ್ನು ಎಂಜಾಯ್ ಮಾಡುತ್ತಿರುವ ಹಿರಿಯರ ಗಾಯನವನ್ನ ಹಲವರು ಮೆಚ್ಚಿ ಗುಣಗಾನ ಮಾಡಿದ್ದಾರೆ.