ನಾಯಿ ಮತ್ತು ಮನುಷ್ಯರ ನಡುವೆ ಸಂಬಂಧ ಅನ್ಯೋನ್ಯವಾಗಿದ್ದು, ಅನೇಕ ಕುಟುಂಬಗಳಲ್ಲಿ ನಾಯಿ ಕೂಡ ಕುಟುಂಬ ಸದಸ್ಯನಂತೆ ಜೊತೆಗೇ ಇರುತ್ತದೆ.
ದೆಹಲಿಯಲ್ಲೊಬ್ಬ ಇ- ರಿಕ್ಷಾ ಚಾಲಕ ತನ್ನ ಪ್ರೀತಿಪಾತ್ರ ನಾಯಿಯನ್ನು ಪ್ರತಿ ದಿನ ಕರೆದುಕೊಂಡು ತಿರುಗುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅವರಿಬ್ಬರ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸುತ್ತಿದೆ.
ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವ್ಯಕ್ತಿಯು, ರಸ್ತೆಯಲ್ಲಿ ಈ ಅಸಂಭವ ಜೋಡಿಯೊಂದಿಗಿನ ಅವರ ಮುಖಾಮುಖಿಯನ್ನು ನೆನಪಿಸಿಕೊಂಡಿದ್ದಾರೆ.
ಕೆಲಸ ಮುಗಿಸಿ ವಾಪಸಾಗುವಾಗ ‘ಮೋತಿ’ ಎಂಬ ಹೆಸರಿನ ಈ ನಾಯಿಯನ್ನು ನೋಡಿದೆ. ನಾನು ಆ ವ್ಯಕ್ತಿಯನ್ನು ಕೇಳಿದಾಗ, ಮೋತಿ ತನ್ನೊಂದಿಗೆ ಪ್ರತಿದಿನ ಪ್ರಯಾಣಿಸಲು ಇಷ್ಟಪಡುತ್ತಾಳೆ ಎಂದು ಹೇಳಿದರು ಎಂದು ವಿವರಿಸಿದ್ದಾರೆ.
ನಾನು ಹೋದಲ್ಲೆಲ್ಲಾ ಅದರೊಂದಿಗೆ ಪ್ರಯಾಣಿಸಲು ಇಷ್ಟ ಎಂದೂ ಹೇಳಿದರು. ಆ ಬೀದಿ ನಾಯಿ ಸವಾರನ ಸೀಟಿನಲ್ಲಿಯೇ ಆರಾಮವಾಗಿ ಕುಳಿತಿರುವುದು ಕಂಡುಬಂದಿತು.
ಇದನ್ನು ಕಂಡ ನೆಟ್ಟಿಗರು ಪ್ರೀತಿ ಭರಿತ ಕಾಮೆಂಟ್ ಮಾಡಿದ್ದಾರೆ. ಹೃದಯದಿಂದ ಆತ ಶ್ರೀಮಂತ, ಮೋತಿ ತುಂಬಾ ಮುದ್ದಾಗಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ರೀತಿಯ ಉದಾಹರಣೆ ಇದೇ ಮೊದಲಲ್ಲ. ಮತ್ತೊಂದು ವೈರಲ್ ವೀಡಿಯೊದಲ್ಲಿ, ಮನೆಯಿಲ್ಲದ ವ್ಯಕ್ತಿಯೊಬ್ಬರು ಟ್ರಾಫಿಕ್ ಲೈಟ್ ಸಿಗ್ನಲ್ನಲ್ಲಿ ಕುಳಿತಿದ್ದು, ಆ ವ್ಯಕ್ತಿ ತನ್ನ ತಟ್ಟೆಯಿಂದ ಬೀದಿ ನಾಯಿಗೆ ಆಹಾರವನ್ನು ನೀಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು.