ಅಮೃತಸರ: ಪೊಲೀಸರು ತಪಾಸಣೆಗಾಗಿ ವಾಹನವನ್ನು ನಿಲ್ಲಿಸಲು ಕೇಳಿದಾಗ, ಪ್ರಯಾಣಿಕರು ಅದನ್ನು ಪಾಲಿಸಬೇಕು. ಆದಾಗ್ಯೂ, ಪಂಜಾಬ್‌ನ ಅಮೃತಸರದ ಇತ್ತೀಚಿನ ಪ್ರಕರಣವೊಂದರಲ್ಲಿ, ಪೊಲೀಸರು ರಿಕ್ಷಾವನ್ನು ನಿಲ್ಲಿಸುವಂತೆ ಕೇಳಿಕೊಂಡರೂ ವ್ಯಕ್ತಿಯೊಬ್ಬ ತನ್ನ ಇ-ರಿಕ್ಷಾದೊಂದಿಗೆ ಓಡಿಹೋಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಅಮೃತಸರದಲ್ಲಿ ನಡೆದಿರುವ ಈ ಘಟನೆಯನ್ನು “ಗ್ರೇಟ್ ಚೇಸ್” ಎಂಬ ಟ್ವಿಟರ್ ಖಾತೆ ಶೇರ್ ಮಾಡಿದೆ. ಒಬ್ಬ ಪೊಲೀಸ್ ಮತ್ತು ಇ-ರಿಕ್ಷಾ ವಾಲಾ ಪೊಲೀಸರ ಕಣ್ಣಿಗೆ ಕಾಣದಂತೆ ಓಡಿಹೋಗಿದ್ದಾನೆ. ಆದರೂ ಸಿನಿಮೀಯ ರೀತಿಯಲ್ಲಿ ಆತನನ್ನು ಬೆನ್ನಟ್ಟಿದ ಪೊಲೀಸರು ಕೊನೆಗೂ ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಿಕ್ಷಾ ಚಾಲಕ ಕೊನೆಯವರೆಗೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದ.
ಆದರೂ ಬೆಂಬಿಡದ ಪೊಲೀಸರು ಅವನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಹಿಡಿದಿದ್ದಾರೆ. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಪ್ರಕಾರ ಚಾಲಕ ಡ್ರಗ್ಸ್ ಸೇವಿಸಿದ್ದ. ವೀಕ್ಷಕರು ಪಂಜಾಬ್ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.