ರಸ್ತೆ ಬದಿ ಅಥವಾ ಪಾರ್ಕಿಂಗ್ ಲಾಟ್ನಲ್ಲಿ ಅನೇಕರು ಪಾರ್ಕಿಂಗ್ ಶಿಸ್ತು ಮರೆತು ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋಗುತ್ತಾರೆ. ಕೆಲವು ಸಂದರ್ಭದಲ್ಲಂತೂ ಇಂತಹ ಬೇಜವಾಬ್ದಾರಿಗಳಿಂದ ಇತರರು ಸಮಸ್ಯೆಗೆ ಸಿಲುಕುತ್ತಾರೆ, ಹಿಡಿಶಾಪ ಹಾಕುತ್ತಾರೆ.
ಆದರೆ, ಡ್ರೈವಿಂಗ್ನಲ್ಲಿ ಚಾಕಚಕ್ಯತೆ ಹೊಂದಿರುವವರು ಇರುವ ಸಣ್ಣ ಅವಕಾಶಗಳನ್ನು ಬಳಸಿಕೊಂಡು ವಾಹನಗಳನ್ನು ಹೊರತೆಗೆಯುವ ಉದಾಹರಣೆ ಸಾಕಷ್ಟಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಾಲಕರೊಬ್ಬರ ರಿವರ್ಸ್ ಗೇರ್ ಕೌಶಲ್ಯ ಗಮನ ಸೆಳೆಯುತ್ತಿದೆ.
ಟ್ವಿಟರ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ತನ್ನ ಕಾರನ್ನು ಸರಾಗವಾಗಿ ಪಾರ್ಕಿಂಗ್ ಸ್ಥಳದಿಂದ ಹೊರತೆಗೆದ ಚಾಲಕನ ಚಾಲನಾ ಕೌಶಲ್ಯ ಸಾಮಾಜಿಕ ಜಾಲತಾಣ ಬಳಕೆದಾರರನ್ನು ವಿಸ್ಮಯಗೊಳಿಸಿದೆ.
ಚಾಲಕನೊಬ್ಬ ತನ್ನ ಕಾರನ್ನು ಪಾರ್ಕಿಂಗ್ ಮಾಡಿದ ಸ್ಥಳದಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವಾಗ ಅದರ ಹಿಂದೆ ಮತ್ತೊಂದು ಕಾರು ಬಂದು ನಿಂತಿತ್ತು. ಚಾಲಕನು ಕಾರನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಮಾಡಿ ನಿಧಾನವಾಗಿ ರಿವರ್ಸ್ ತೆಗೆದುಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕಾರು ಯಾವುದೇ ವಾಹನಗಳಿಗೆ ಹಾನಿಯಾಗದಂತೆ ರಸ್ತೆಗೆ ಸರಾಗವಾಗಿ ಹಿಂತಿರುಗಿದ್ದು, 20 ಸೆಕೆಂಡುಗಳ ವಿಡಿಯೋ ಯಾವ ಸ್ಥಳದ್ದು ಎಂದು ತಿಳಿಸಲಾಗಿಲ್ಲ. ಆದರೆ, ವೀಡಿಯೊ 36.2ಕೆ ವೀಕ್ಷಣೆ ಕಂಡಿದೆ.
ನೆಟ್ಟಿಗರನೇಕರು ಚಾಲಕನ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರಂತೂ ಇದನ್ನು ಆನ್ಲೈನ್ ಆಟಕ್ಕೆ ಹೋಲಿಸಿದ್ದಾರೆ.
https://twitter.com/level_athena/status/1569345512184111107?ref_src=twsrc%5Etfw%7Ctwcamp%5Etweetembed%7Ctwterm%5E1569345512184111107%7Ctwgr%5Ecc18831115cee0bc778ea821aff5397ec3d3cfe5%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-driver-smoothly-reverses-his-parked-car-without-hitting-closely-parked-vehicles-5945827.html