ಹೊನಲೂಲುನತ್ತ ಹೊರಟಿದ್ದ ಯುನೈಟೆಡ್ ಏರ್‌ಲೈನ್ಸ್‌ನ ವಿಮಾನವೊಂದರ ಇಂಜಿನ್ ವಿಫಲವಾಗಿದ್ದು, ಅದೃಷ್ಟವಶಾತ್ ಡೆನ್ವರ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದ ಭಾಗಗಳು ಆಗಸದಿಂದ ನೆಲದ ಮೇಲೆ ಬೀಳುತ್ತಿರುವ ವಿಡಿಯೋ ಫುಟೇಜ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬೋಯಿಂಗ್ 777-200 ವಿಮಾನದಲ್ಲಿ 231 ಪ್ರಯಾಣಿಕರು ಇದ್ದು, 10 ಸಿಬ್ಬಂದಿ ಸಹ ಇದ್ದರು. ಹೊನಲೂಲುನತ್ತ ಹೊರಟಿದ್ದ ವಿಮಾನವು ಟೇಕಾಫ್ ಆಗುತ್ತಲೇ ಅದರ ಇಂಜಿನ್ ವೈಫಲ್ಯಗೊಂಡಿದೆ ಎಂದು ಏರ್‌ಲೈನ್ ತಿಳಿಸಿದೆ. ಘಟನೆಯಲ್ಲಿ ಯಾರಿಗೂ ಗಾಯವಾದ ವರದಿಗಳು ಆಗಿಲ್ಲ.
ಮನೆಯಾಗಿ ಬದಲಾಯ್ತು ಡಬಲ್ ಡೆಕ್ಕರ್ ಬಸ್….?
ಕೊಲರಾಡೋದ ಬ್ರೂಮ್‌ಫೀಲ್ಡ್ ಪೊಲೀಸರು ಚಿತ್ರಗಳನ್ನು ಸೆರೆ ಹಿಡಿದಿದ್ದು, ನೆಲದ ಮೇಲೆ ಬಿದ್ದ ವಿಮಾನದ ಭಾಗಗಳನ್ನು ನೋಡಬಹುದಾಗಿದೆ. ವಿಮಾನದ ಒಳಗಿನಿಂದ ತೆಗೆದಂತೆ ಕಾಣುವ ವಿಡಿಯೋವೊಂದರಲ್ಲಿ ಇಂಜಿನ್‌ಗೆ ಬೆಂಕಿ ಬಿದ್ದಿರುವುದನ್ನು ನೋಡಬಹುದಾಗಿದೆ.