alex Certify ‘ಮೋದಕ’ ತಿನ್ನುವ ಮುನ್ನ ಗಣೇಶನ ಅಪ್ಪಣೆ ಕೇಳಿದ ಶ್ವಾನ : ಮುದ್ದಾದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮೋದಕ’ ತಿನ್ನುವ ಮುನ್ನ ಗಣೇಶನ ಅಪ್ಪಣೆ ಕೇಳಿದ ಶ್ವಾನ : ಮುದ್ದಾದ ವಿಡಿಯೋ ವೈರಲ್​

ದೇಶದ ಜನತೆ ಸದ್ಯ ಗಣೇಶ ಚತುರ್ಥಿಯ ಸಂಭ್ರಮದಿಂದ ಹೊರಬಂದಿಲ್ಲ. ಅನೇಕ ಮನೆಗಳಲ್ಲಿ ಗಣಪತಿ ವಿಸರ್ಜನೆ ಕಾರ್ಯ ಪೂರ್ಣಗೊಂಡಿದ್ದರೆ ಇನ್ನೂ ಕೆಲವು ಮನೆಗಳಲ್ಲಿ ಇಂದಿಗೂ ಗಣಪತಿ ಇದ್ದಾನೆ.

ಸೋಶಿಯಲ್​ ಮೀಡಿಯಾದಲ್ಲಿ ಗಣೇಶ ಚತುರ್ಥಿ ಸಂಬಂಧ ಅನೇಕ ವಿಡಿಯೋಗಳು ವೈರಲ್​ ಆಗ್ತಿವೆ. ಈ ಸಾಲಿಗೆ ಇನ್ನೊಂದು ವಿಡಿಯೋ ಸೇರಿದ್ದು ಮುದ್ದಾದ ಶ್ವಾನವೊಂದು ಮೋದಕವನ್ನು ತಿನ್ನುವ ಮುನ್ನ ದೇವರ ಕಡೆಗೆ ಭಕ್ತಿಯಿಂದ ನೋಡುತ್ತಾ ಅನುಮತಿ ಕೇಳುತ್ತಿದೆ.

ಶ್ವಾನದ ಈ ಮುದ್ದಾದ ವರ್ತನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಬಿರುಗಾಳಿ ವೇಗದಲ್ಲಿ ಹರಿದಾಡ್ತಿದೆ.

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು. ಅವನು ಮೊದಲು ದೇವರ ಪಾದವನ್ನು ಸ್ಪರ್ಶಿಸುವ ಮೂಲಕ ಮೋದಕ ತಿನ್ನಲು ಅನುಮತಿ ಕೇಳಿದ್ದಾನೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮುದ್ದಾದ ಮೋದಕ ಕಳ್ಳ ಅಂತಾ ನಾಯಿಯನ್ನು ಕರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...